Site icon PowerTV

ಸಿಎಂ ಬಸವರಾಜ್​ ಎಸ್​ ಬೊಮ್ಮಾಯಿಗೆ ಹಣದ ಅಭಿಷೇಕ

ಮೈಸೂರು: ಪಿಎಸ್​ಐ ಪರೀಕ್ಷೆ ನೇಮಕಾತಿಯಲ್ಲಿ ಅಕ್ರಮದ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್​ಎಸ್​ಯುಐ) ಸಂಘಟನೆ ಪ್ರತಿಭಟನೆ ನಡೆಸಿದರು.

ಇಂದು ಮೈಸೂರಿನ ರಾಮಸ್ವಾಮಿ ಸರ್ಕಲ್​ ಬಳಿ ­ಸಿಎಂ ಬಸವರಾಜ್​ ಎಸ್​ ಬೊಮ್ಮಾಯಿ ಅವರ ಅಣಕು ಪ್ರದರ್ಶನ ಮಾಡಿ ವಿನೂತನ ಪ್ರತಿಭಟನೆ ಮಾಡಿದರು.

ಇನ್ನು ಪೊಲೀಸ್, ಡಾಕ್ಟರ್, ಲಾಯರ್ ವೇಷಧರಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮದಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ ವಿಫಲವಾಗಿದ್ದು, ಪರೀಕ್ಷೆ ವಜಾ ಮಾಡಿ ಪ್ರಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಸರ್ಕಾರ ಚೆಲ್ಲಾಟ ಆಡ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Exit mobile version