Site icon PowerTV

20 ಸಾವಿರ ಆಸೆಗೆ ಯುವಕ ನೀರುಪಾಲು

ವಿಜಯಪುರ : 20 ಸಾವಿರ ಬೆಟ್ಟಿಂಗ್ ಕಟ್ಟಿ ಹುಚ್ಚು ಸಾಹಸಕ್ಕೆ ಕೈಹಾಕಿ ವ್ಯಕ್ತಿ ನೀರು ಪಾಲಾದ ಘಟನೆ ವಿಜಯಪುರ ಜಿಲ್ಲೆ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ.

ದ್ಯಾಬೇರಿ ಗ್ರಾಮದ ಪ್ರಕಾಶ್ ಮೋರೆ (45) ಸಾವನಪ್ಪಿದ್ದು, ನಿನ್ನೆ ಮಧ್ಯಾಹ್ನ ದ್ಯಾಬೇರಿ ಗ್ರಾಮದ ಬಳಿಯಿರುವ ಕೆರೆಯಲ್ಲಿ ಈಜುವ ಬೆಟ್ಟಿಂಗ್ ಕಟ್ಟಿದ್ದ ಪ್ರಕಾಶ್. ತನ್ನ ಸ್ನೇಹಿತರ ಜೊತೆ ನಿನ್ನೆ ಮಧ್ಯಾಹ್ನ ಪಾರ್ಟಿ ಮಾಡಿ ಮದ್ಯೆ ಸೇವಿಸಿ ಕೆರೆ ಬಳಿ ಬಂದಿದ್ದ ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಜಿ ದಡ ಸೇರಬೇಕು ಎಂದು ಬೆಟ್ಟಿಂಗ್ ಕಟ್ಟಿದ ಸ್ನೇಹಿತರು. 20 ಸಾವಿರ ಬೆಟ್ಟಿಂಗ್ ಆಸೇಗಾಗಿ ನೀರಿಗೆ ಜಿಗಿದ ಪ್ರಕಾಶ ಕುಡಿದ ಮತ್ತಿನಲ್ಲಿ ಹಾಗೂ ಸರಿಯಾಗಿ ದಡ ಗುರುತಿಸಲಾಗದೆ ಕೈ ಸೋತು ನೀರು ಪಾಲಾಗಿದ್ದಾನೆ.

ಪ್ರಕಾಶ ನೀರು ಪಾಲಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾದ ಸ್ನೇಹಿತರು. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಶವ ಹೊರತೆಗೆದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version