Site icon PowerTV

KGF-2ಗೆ 25 ದಿನಗಳ ಸಂಭ್ರಮ

ಕೆಜಿಎಫ್ ಚಾಪ್ಟರ್ 2′ ಬಿಡುಗಡೆಯಾಗಿ ನಿನ್ನೆಗೆ 25 ದಿನಗಳನ್ನು ಪೂರೈಸಿದೆ. ಕಳೆದ 24 ದಿನಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಹಲವು ದಾಖಲೆಗಳನ್ನು ಮುರಿದಿದೆ.

ಕನ್ನಡದ ಜೊತೆ ಜೊತೆಗೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕಲೆಕ್ಷನ್ ಭೇಟೆ ಮುಂದುವರೆಸಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ – 2’ ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ.

ಹಿಂದಿಯಲ್ಲಂತೂ ಯಾರೂ ಊಹಿಸಿರದ ದಾಖಲೆಗಳನ್ನು ಮಾಡಿದೆ. ಟ್ರೇಡ್ ಅನಲಿಸ್ಟ್‌ಗಳು ಲೆಕ್ಕಾಚಾರ ಮಾಡಿ, ‘ಕೆಜಿಎಫ್ 2’ ಹಿಂದಿ ಮಾರುಕಟ್ಟೆಯಲ್ಲೇ 403 ರಿಂದ 405 ಕೋಟಿ ಗಳಿಸಿರಬಹುದು ಎಂದು ಹೇಳುತ್ತಿದ್ದಾರೆ. 25 ದಿನ ಪೂರೈಸಿರುವ ಕೆಜಿಎಫ್​ – 2 ಸಿನಿಮಾ ಇಲ್ಲಿಯವರೆಗೂ ಒಟ್ಟು 1129 ಕೋಟಿ ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗಿದೆ. ಆರ್​​ಆರ್​​ಆರ್​ ಸಿನಿಮಾದ ಕಲೆಕ್ಷನ್​ ಬೀಟ್​ ಮಾಡಿದೆ ಕೆಜಿಎಫ್​- 2 ಸಿನಿಮಾ ಎಂದು ಹೇಳಲಾಗುತ್ತಿದೆ.

Exit mobile version