Site icon PowerTV

ಸುಪ್ರಭಾತ ಚಾಲನೆಗೆ ಸಿದ್ಧತೆ ಮಾಡಿಕೊಂಡ ಶ್ರೀರಾಮ ಸೇನೆ

ಹುಬ್ಬಳ್ಳಿ: ಹಿಂದೂಪರಸಂಘಟನೆಗಳು ಹಮ್ಮಿಕೊಂಡಿರುವ ಅಜಾನ್ ಅಭಿಯಾನ ನಾಳೆ ದಿನದಿಂದ ಶುರುವಾಗಲಿದೆ, ಈ ಹಿನ್ನಲೆಯಲ್ಲಿ ತಯಾರಿ ನಡೆಸಿರುವ ಶ್ರೀರಾಮ ಸೇನೆ ಕಾರ್ಯಕರ್ತರು ಸುಪ್ರಭಾತ,ಭಜನೆ,ಹನುಮಾನ್ ಚಾಲಿಸ್ ಹಚ್ಚಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಹುಬ್ಬಳ್ಳಿಯ ಶ್ರೀರಾಮ ಸೇನೆಯ ಘಟಕದಿಂದ ಹಳೆ ಹುಬ್ಬಳ್ಳಿ ದೇವಸ್ಥಾನಗಳಲ್ಲಿ ಸುಪ್ರಭಾರ್ತಕ್ಕೆ ತಯಾರಿ ಮಾಡಲಾಗಿದ್ದು ಎಲ್ಲರ ಚಿತ್ತ ಈಗ ವಿವಾದಿತ ಹಳೆ ಹುಬ್ಬಳ್ಳಿ ಸುತ್ತ ನೆಟ್ಟಿದೆ. ಈಗಾಗಲೇ ಅಲ್ಪ ಸಂಖ್ಯಾತ ಮುಖಂಡರು ಪೊಲೀಸ್ ಕಮಿಷನರ್​ಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದು ಪೊಲೀಸರು ಕೂಡ ಹದ್ದಿನ ಕಣ್ಣು ಇಟ್ಟಿದ್ದಾರೆ.

ಈ ಹಿಂದೆ ದಾಳಿಗೆ ಒಳಗಾಗಿದ್ದ ಗಣಪತಿ ದೇವಸ್ಥಾನ ಸೇರಿದಂತೆ ಹತ್ತು ದೇವಸ್ಥಾನಗಳಲ್ಲಿ ತಯಾರಿ ಸುಪ್ರಭಾತ ತಯಾರಿನಡೆಸಲಾಗಿದೆ ಎಂದು  ಪವರ್ ಟಿವಿಗೆ  ಶ್ರೀರಾಮ ಸೇನೆ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ ಮಾಹಿತಿ ನೀಡಿದ್ದಾರೆ.ಸರ್ಕಾರ ಕ್ರಮ ಕೈಗೊಳ್ಳುವರೆಗೂ ಸುಪ್ರಭಾತ ಹಾಕುತ್ತೇವೆ,ಮನವಿಗೆ ಸ್ಪಂದಿಸಿದ ದೇವಸ್ಥಾನಗಳಲ್ಲಿ ಮಾತ್ರ ಸುಪ್ರಭಾತ ಕ್ಕೆ ತಯಾರಿ ಮಾಡಲಾಗಿದ್ದು ನಾಳೆ ಬೆಳಗಿನ ಜಾವ ದೇವಸ್ಥಾನಗಳಲ್ಲಿ ಭಜನೆ ಮತ್ತು ಸುಪ್ರಭಾತ ಅಭಿಯಾನ ಶುರುವಾಗಲಿದೆ.

Exit mobile version