Site icon PowerTV

ಲಲಿತ ಸಹಸ್ರನಾಮಗಳನ್ನ ಹಾಡುವ ಮೂಲಕ ನಮ್ಮ ಶಕ್ತಿ ತೋರುತ್ತೇವೆ : ಪ್ರಶಾಂತ್ ಸಂಬರಗಿ

ಬೆಂಗಳೂರು: ಮುಂದಿನ ದಿನಗಳಲ್ಲಿ ಸ್ಪೀಕರ್ ಪರವನಿಗೆ ಇಲ್ಲದೇ ಧಾರ್ಮಿಕ ಕೇಂದ್ರಗಳಲ್ಲಿ ಭಜನೆಗಳು, ವಚನಗಳು ಲಲಿತ ಸಹಸ್ರನಾಮಗಳನ್ನ ಹಾಡುವ ಮೂಲಕ ನಮ್ಮ ಶಕ್ತಿ ತೋರುತ್ತೇವೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಮುಕ್ತ ಭಾರತ ಮಾಡ್ಬೇಕು. ಇದಕ್ಕೆ ಎಲ್ಲಾ ಹಿಂದೂಗಳು ಒಂದಾಗ್ಬೇಕು. ಇಂದು ನಾವು ಸಂಕಲ್ಪ ಮಾಡಬೇಕಾದ ಅನಿವಾರ್ಯ ಇದೆ. ಮೇ 9 2022 ರಂದು 1000 ಕ್ಕೂ ಹೆಚ್ಚು ಕಂಪ್ಲೇಟ್​ಗಳನ್ನ ಕೊಟ್ಟಿದ್ವಿ. ಎಲ್ಲೇಲ್ಲಿ ಜನರಿಗೆ ಸ್ಪೀಕರ್​ಯಿಂದ ತೊಂದರೆಯಾಗ್ತಿದೆ ಅವರು ಕಂಪ್ಲೇಟ್ ಕೊಡಬೇಕು ಎಂದರು.

ಅದುವಲ್ಲದೇ, ನಾಗರಿಕ ಸಮಾಜದಲ್ಲಿ ಹೇಗಿರಬೇಕೆಂದು ಜನರಿಗೆ ಮಾಹಿತು ನೀಡಿದ್ವಿ. ನಮಗೆ ಆಗುವ ತೊಂದರೆ ಗೊತ್ತಾಗಬೇಕು. ಡೆಸಿಬಲ್ ಬಗ್ಗೆ ಮುಸ್ಲಿಂಮರಿಗೆ ಮಾಹಿತಿ ಇಲ್ಲ. ಜನರನ್ನ ಗೊಂದಲಕ್ಕೆ ಇಟ್ಟುಮಾಡ್ತಿದ್ದಾರೆ. ಅವರದೇ ಭಾಷೆಯಲ್ಲಿ ಸ್ಪೀಕರ್ ಹಾಕುವುದರ ಮೂಲಕ ಅವರಿಗೆ ಬುದ್ದಿ ಕಲಿಸುತ್ತೇವೆ. ಲೌಡ್ ಸ್ಪೀಕರ್ ಬ್ಯಾನ್ ಆಗಿದ್ರು ಯೂಸ್ ಮಾಡ್ತಾರೆ. ಬೆಳ್ಳಿಗೆ 5 ಗಂಟೆಗೆ ಅಜಾನ್ ಹಾಕಿಕೊಂಡು ಕೋರ್ಟ್ ಆದೇಶ ಉಲ್ಲಂಘನೆ ಮಾಡ್ತಾರೆ ಕಾನೂನಿನ ಚೌಕಟ್ಟಿನಲ್ಲಿ ಬದುಕುವವರು ನಾವು ಯಾವ ರೀತಿ ಹೋರಾಟ ಮಾಡಬೇಕೆಂದು ಸಿದ್ದವಾಗಿದ್ದೇವೆ ಎಂದು ಹೇಳಿದರು.

ಇನ್ನು, 300 ಜನ ಲಲಿತಾ ಸಾಹಸ್ರನಾಮ ಹಾಡ್ತೇವೆ. ಬೈಕ್​​ನಲ್ಲಿ ಆರನ್ ಮಾಡುವುದಿರಲ್ಲಿ ಹೀಗೆ ವಿಭಿನ್ನವಾಗಿ ಹೋರಾಟ ಇರುತ್ತೆ. ಕಾನೂನು ಬಾಹಿರ ಲೋಡ್ ಸ್ಪೀಕರ್ ವಿರುದ್ಧ ನಮ್ಮ ಹೋರಾಟ ಇರುತ್ತೆ. ಕಾನೂನು ಬಾಹಿರ ಲೋಡ್ ಸ್ಪೀಕರ್ ವಶಪಡಿಸಿಕೊಳ್ತೇವೆ. ಸರ್ಕಾರ ಹೇಳಿದ್ರೆ ನಾವು ಹೋರಾಟ ಕೈ ಬಿಡ್ತೇವೆ. ನಾಳೆ ಹಿಂದೂ ಗೀತೆಗಳನ್ನ ಹಾಡುವ ಮೂಲಕ ಹೋರಾಟ ಇರುತ್ತೆ. ಈಗ್ಲೇ ನಮ್ಮ ಹೋರಾಟದ ರೂಪರೇಷೆ ಹೇಳಿದ್ರೆ ಪೊಲೀಸರು ನಿಲ್ಲಿಸುವ ಪ್ರಯತ್ನ ಮಾಡ್ತಾರೆ. ಹಾಗಾಗಿ ನಾಳೆ ಬೆಳ್ಳಿಗೆ 5.30 ಕ್ಕೆ ಹೋರಾಟದ ರುಪುರೇಷೆ ತಿಳಿಸುವುದಾಗಿ ಪ್ರಶಾಂತ್ ಸಂಬರಗಿ ಹೇಳಿದರು.

Exit mobile version