Site icon PowerTV

5 ವರ್ಷ ಡ್ರಗ್ಸ್ ಹಣದಲ್ಲಿ ಸಿದ್ದರಾಮಯ್ಯ ಆಡಳಿತ ಮಾಡಿದ್ರು : ನಳೀನ್​ ಕುಮಾರ್​ ಕಟೀಲ್​

ಬೆಂಗಳೂರು: ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಆಡಳಿತ ನಡೆಸುದ್ರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಟೀಲ್ ಗಂಭೀರ ಆರೋಪವನ್ನು ಮಾಡಿದ್ದಾರೆ.

ಬಿಜೆಪಿ ಕಛೇರಿಯಲ್ಲಿ ಮಾತನಾಡಿದ ಅವರು ಐದು ವರ್ಷ ಡ್ರಗ್ಸ್ ಹಣದಲ್ಲಿ ಸಿದ್ದರಾಮಯ್ಯ ಆಡಳಿತ ಮಾಡಿದ್ರು ಆದ್ರೆ ಬೊಮ್ಮಾಯಿ‌ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿದ್ದಾರೆ. ಸಿದ್ದರಾಮಯ್ಯ ನಮಗೆ ಪಾಠ ಮಾಡ್ತಾರೆ. ಕಾಂಗ್ರೆಸ್ ನ ಎಲ್ಲ ನಾಯಕರು ಭ್ರಷ್ಟಾಚಾರಿಗಳು ಬೇಲ್ ಮೇಲೆ ಕಾಂಗ್ರೆಸ್ ನಾಯಕರು ಇದ್ದಾರೆ ಎಂದರು.

ಇನ್ನೂ ಹುಬ್ಬಳ್ಳಿ ಗಲಭೆಗೆ ಕಾರಣ ಸಿದ್ದರಾಮಯ್ಯ ಶಿವಮೊಗ್ಗ ಗಲಭೆ, ಡಿಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆಗೆ ಸಿದ್ದರಾಮಯ್ಯ ಕಾರಣ ಬೇಕಿದ್ರೆ ಸಿದ್ದರಾಮಯ್ಯ ಹೇಳಲಿ. ಶಾಸಕರ ಮನೆಗೆ ಸಂಪತ್ ರಾಜ್ ಮನೆಗೆ ಬೆಂಕಿ ಹಾಕಿದ್ರೂ ಆದ್ರೆ ಸಂಪತ್ ರಾಜ್ ನ್ನು‌ ಕಾಂಗ್ರೆಸ್ ಹೊರಗೆ ಹಾಕಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.

Exit mobile version