Site icon PowerTV

ಅಂಜನಾದ್ರಿಯನ್ನ ಮಂತ್ರಾಲಯದ ಮಠಕ್ಕೆ ಹಸ್ತಾಂತರ ಮಾಡಬೇಕು : HR ಶ್ರೀನಾಥ್

ಕೊಪ್ಪಳ : ಪೂಜಾ ವಿಧಿ ವಿಧಾನ ಮತ್ತು ಅಭಿವೃದ್ಧಿ ವಿಷಯಕ್ಕಾಗಿ ಮಂತ್ರಾಲಯದ ಮಠಕ್ಕೆ ಅಂಜನಾದ್ರಿ ಹಸ್ತಾಂತರ ಮಾಡಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀನಾಥ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೂಜಾ ವಿಧಿ ವಿಧಾನ ಮತ್ತು ಅಭಿವೃದ್ಧಿ ವಿಷಯಕ್ಕಾಗಿ ಮಂತ್ರಾಲಯದ ಮಠಕ್ಕೆ ಅಂಜನಾದ್ರಿ ಹಸ್ತಾಂತರ ಮಾಡಬೇಕು ಕೂಡಲೇ ಅಂಜನಾದ್ರಿಯನ್ನ ಮಂತ್ರಾಲಯ ಮಠಕ್ಕೆ ಹಸ್ತಾಂತರ ಮಾಡಬೇಕೆಂದು ಶ್ರೀನಾಥ್ ಒತ್ತಾಯ ಮಾಡಿದ್ದಾರೆ.

ಸದ್ಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರೋ ಅಂಜನಾದ್ರಿ ಬೆಟ್ಟ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾದ ಅಂಜನಾದ್ರಿ ಪರ್ವತ ವಿಶ್ವದಲ್ಲಿ ಅಂಜನಾದ್ರಿ ಪರ್ವತ ದೊಡ್ಡ ಧಾರ್ಮಿಕ ಕೇಂದ್ರವಾಗ್ತಿದೆ. ಅಲ್ಲಿ ನಮ್ಮ ಧರ್ಮದ ಪ್ರಕಾರ ಹನುಮನ‌ ಪೂಜೆ ನಡಿಬೇಕು. ಅದೇ ಕಾರಣಕ್ಕೆ ಮಂತ್ರಾಲಯದ ರಾಯರ ಮಠಕ್ಕೆ ಅಂಜನಾದ್ರಿ ಹಸ್ತಾಂತರ ಮಾಡಬೇಕು. ಮಂತ್ರಾಲಯ ಮಠಕ್ಕೆ ಹಸ್ತಾಂತರ ಮಾಡಿದ್ರೆ,ಅಂಜನಾದ್ರಿ ಇನ್ನು ದೊಡ್ಡ ಶಕ್ತಿ ಕೇಂದ್ರವಾಗತ್ತೆ. ರಾಘವೇಂದ್ರ ಸ್ವಾಮಿಗಳು ಹನುಮನ ಭಕ್ತರು, ಅಂಜನಾದ್ರಿ ಪಕ್ಕವೇ ನವ ವೃಂದಾವನ ಇದೆ. ಇದೆಲ್ಲ ಕಾರಣಕ್ಕೆ ಅಂಜನಾದ್ರಿಯನ್ನ ಮಂತ್ರಾಲಯದ ರಾಯರ ಮಠಕ್ಕೆ ಹಸ್ತಾಂತರ ಮಾಡಬೇಕೆಂದು HR ಶ್ರೀನಾಥ್ ಒತ್ತಾಯ ಮಾಡಿದ್ದಾರೆ.

Exit mobile version