Site icon PowerTV

‘ಈಟ್ ಕಾ ಜವಾಬ್ ಪತ್ತರ್ ಸೇ’ : ರಾಜೂ ಖಾನಪ್ಪ

ಗದಗ: ‘ಈಟ್ ಕಾ ಜವಾಬ್ ಪತ್ತರ್ ಸೇ’ ರೀತಿಯಲ್ಲಿ ಸ್ಪೀಕರ್ ಎದುರು ಸ್ಪೀಕರ್ ಹಚ್ಚುತ್ತೇವೆ ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ್ ಹೇಳಿದ್ದಾರೆ.

ರಾಜ್ಯಾದ್ಯಂತ ಸ್ಪೀಕರ್ ಅಭಿಯಾನ ನಡೆಯಲಿದೆ. ನಗರದ ಮೂರು ಪ್ರಮುಖ ಮಂದಿರದಲ್ಲಿ ಬೆಳಗಿನ ಜಾವ ಐದು ಗಂಟೆಗೆ ಭಜನೆ, ರಾಮನಾಮ ಜಪ ಹಾಗೆನೇ ರಾಜ್ಯದ ಎಲ್ಲ ಮಂದಿರ ಮಠದ ಮೇಲೆ ಸ್ಪೀಕರ್ ಹಚ್ಚುತ್ತೇವೆ ಎಂದರು.

ಇನ್ನು, ಎರಡು ದಶಕದಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಈವರೆಗೂ ಅನಧಿಕೃತ ಸ್ಪೀಕರ್​ಗಳನ್ನ ತೆರವು ಮಾಡಿಲ್ಲ. ಈ ಬಾರಿ ನಿರ್ಣಾಯಕ ಹೋರಾಟ ಮಾಡಲು ಮುಂದಾಗಿದ್ದೇವೆ. ಸರ್ಕಾರ ಈ ಕೂಡಲೇ ಎಚ್ಚೆತ್ತು ಕೊಳ್ಳಬೇಕು. ಇದು ಪ್ರಾರಂಭ. ಮುಂದೆ ಮನೆ ಮನೆಗೆ ಸ್ಪೀಕರ್ ಹಚ್ಚುತ್ತೇವೆ ಎಂದು ಹೇಳಿದರು.

Exit mobile version