Site icon PowerTV

ವಜ್ರ ಮಹೋತ್ಸವದಲ್ಲಿ ಸಿಎಂ ಭಾಗಿ

ಬೆಂಗಳೂರು: ಮೊದಲಿಯಾರ್ ಸೇವಾ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ಇಂದು ಬೆಳಗ್ಗೆ ರಾಜಾಜಿನಗರದ ವಿಧಾನಸಭೆ ಕ್ಷೇತ್ರದ ಪ್ರಕಾಶ್ ನಗರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ ಮೋಹನ್,‌ರಾಜಾಜಿನಗರದ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಮಾತನಾಡಿ, ಮೊದಲಿಯಾರ್ ಸಮುದಾಯ ದೊಡ್ಡ ಇತಿಹಾಸ ಇರುವ ಸಮುದಾಯ. ಇವರು ತಮಿಳುನಾಡು ಇರಲಿ ಕರ್ನಾಟಕ ಇರಲಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಮೈಸೂರು ಸಂಸ್ಥಾನ ಇತಿಹಾಸದಲ್ಲಿ ಒಳ್ಳೆಯ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ ಎಂದರು.

ಇನ್ನು, ರಾಮಸ್ವಾಮಿ ಮೊದಲಿಯಾರ್ ಅವರ ಪಾತ್ರ ಬಹಳ ಮುಖ್ಯವಾಗಿದೆ. ಬಹಳಷ್ಟು ಕಟ್ಟಡಕ್ಕೆ ಮೊದಲಿಯಾರ್ ಸಮುದಾಯ ಹೆಸರು ಇಟ್ಟಿದ್ದಾರೆ. ವಿಧಾನಸೌಧದ ನಿರ್ಮಾಣದಲ್ಲಿ ಮೊದಲಿಯಾರ್ ಸಮುದಾಯ ನಾಯಕರು ಬಹಳ ಪಾತ್ರ ವಹಿಸಿದ್ದಾರೆ. ಬೆಂಗಳೂರು ‌ನಿರ್ಮಾಣದಲ್ಲಿಯೂ ಮೊದಲಿಯಾರ್ ಸಮುದಾಯದ ಪಾತ್ರ ಬಹಳವಿದೆ. ಈ ಸಮುದಾಯ ಶಿಕ್ಷಣದಲ್ಲೂ ಬಹಳ ಮುಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

Exit mobile version