Site icon PowerTV

ಕುರ್ಚಿ ಉಳಿಸಿಕೊಳ್ಳಲು ದೊಡ್ಡಗೌಡ್ರ ಮೊರೆ ಹೋದ್ರಾ ಸಿಎಂ?

ಬೆಂಗಳೂರು: ಹೈಕಮಾಂಡ್‌ ಮನವೊಲಿಸಲು ದೇವೇಗೌಡರ ಮೂಲಕ ಮನವೊಲಿಸಲು ಸಿಎಂ ಬೊಮ್ಮಾಯಿ ಪ್ರಯತ್ನಿಸಿದ್ದಾರೆ.

ಮಾಜಿ ಪ್ರಧಾನಿಯಿಂದ ಮೋದಿಗೆ ಕರೆ ಮಾಡಿಸಿದ ಸಿಎಂ ಬೊಮ್ಮಾಯಿ ನಾಯಕತ್ವ ಬಗ್ಗೆ ಬದಲಾವಣೆ ವಿಚಾರದಲ್ಲಿ ಸರ್ಕಾರದಲ್ಲಿ ಮತ್ತೊಮ್ಮೆ ಚಂಡಮಾರುತ ಎದ್ದಿದೆ, ಆತಂಕ ಮತ್ತು ಗೊಂದಲದಲ್ಲಿಯೇ ಕೆಲಸ‌ ನಿರ್ವಹಿಸುತ್ತಿರುವ ಸಿಎಂ ಮೇ 9 ರಂದು ರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದಾರೆ.

ಅದುವಲ್ಲದೇ, ಕೇಂದ್ರ ಮಂತ್ರಿಗಳು, ಹೈಕಮಾಂಡ್ ಭೇಟಿಗೆ ಟೈಂ ಫಿಕ್ಸ್‌ ಆಗದಿದ್ದರೂ ದೆಹಲಿಗೆ ಪ್ರಯಾಣಿಸಲಿದ್ದು, ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಮಾಜಿ ಡಿಸಿಎಂ‌ ಲಕ್ಷ್ಮಣ್ ಸವದಿ ರಹಸ್ಯ ಸಭೆ ನಡೆಸಿದ್ದು, ಕುರ್ಚಿ ಉಳಿಸಿಕೊಳ್ಳಲು ಕೇಂದ್ರ ಸಚಿವರು, RSS ನಾಯಕರ ರಹಸ್ಯ ಭೇಟಿ ಮಾಡಿದ್ದಾರೆ. ಕಳೆದ ಎರಡು ವಾರದಲ್ಲಿ 15ಕ್ಕೂ ಹೆಚ್ಚು ಪ್ರಮುಖ ನಾಯಕರಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಿದೆ.

Exit mobile version