Site icon PowerTV

ಸಂಪುಟ ಪುನಾರಚನೆ ಆಗುತ್ತೆ ಎಂದು ಆಸೆಯಲ್ಲಿದ್ದವರಿಗೆ ಬಿಗ್‌ಶಾಕ್‌..!

ಬೆಂಗಳೂರು: ಸಂಪುಟ ಪುನಾರಚನೆ ಆಗುತ್ತೆ ಎಂದು ಆಸೆಯಲ್ಲಿದ್ದವರಿಗೆ ಸಿಎಂ ಬೊಮ್ಮಾಯಿ ಅವರಿಂದಲೇ ಪದೇ ಪದೇ ವಿಘ್ನ ಎದುರಾಗಲಿದೆ.

ಸಿಎಂ ಬೊಮ್ಮಾಯಿ ಅಧಿಕಾರ ದುರುಪಯೋಗದ ಪರಮಾವಧಿ ಹೇಗಿದೆ..? ಇಂದು, ನಾಳೆ ಎಂದು ಕೊಂಡೇ 8 ತಿಂಗಳು ಸಮಯ ಕಳೆದಿರುವ ಸಿಎಂ ಸಿಎಂ ಬೊಮ್ಮಾಯಿಗೆ ಸಂಪುಟ ಪುನಾರಚನೆ ಮಾಡೋಕೆ ಮನಸ್ಸು ಇಲ್ವಾ..? ಇದುವರೆಗೂ ಹೈಕಮಾಂಡ್ ನಾಯಕರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಯೇ ಇಲ್ಲ..! ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವ ಬಗ್ಗೆ ಚರ್ಚಿಸದ ಸಿಎಂ ಸಂಪುಟ ಪುನಾರಚನೆಗೆ ಸಿಎಂ ಬೊಮ್ಮಾಯಿ ಅವರಿಂದಲೇ ಪದೇ ಪದೇ ವಿಘ್ನ ಎದುರಾಗಿದೆ.

ಇನ್ನು, 5 ಬಾರಿ ಪಕ್ಷದ ಹೈಕಮಾಂಡ್ ಭೇಟಿ ವೇಳೆ ಸಂಪುಟದ ಬಗ್ಗೆ ಮಾತನಾಡದ ಸಿಎಂ, ಸಿಎಂ ಬೊಮ್ಮಾಯಿ ಸಂಪುಟ ಪುನಾರಚನೆಗೆ ಮನಸ್ಸು ಮಾಡದಿರಲು ಕಾರಣವೇನು..? ಖಾಲಿ ಇರುವ 5 ಸ್ಥಾನ ಭರ್ತಿ ಮಾಡುವುದಕ್ಕಿಂತ ಹಾಗೆ ಉಳಿಯಲಿ ಎಂಬುದು ಸಿಎಂ ಮನದಿಚ್ಚೆನಾ..? ಸಿಎಂಗೆ ಸಂಪುಟ ವಿಸ್ತರಣೆ ಮಾಡಿ ಮೈಮೇಲೆ ರಿಸ್ಕ್ ಎಳೆದುಕೊಳ್ಳಲು ಇಷ್ಟವಿಲ್ಲ..! ಹೀಗಾಗಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡಿದ್ರೆ ಅಸಮಾಧಾನ ಸ್ಫೋಟ ಸಾಧ್ಯತೆ ಇದೆ. ಈ ವೇಳೆ ಮತ್ತೆ ಸಿಎಂ ಬೊಮ್ಮಾಯಿ ಕುರ್ಚಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ರಿಸ್ಕ್ ಬೇಡ ಅಂತ ಸಿಎಂ ಕಾಲ‌ ಕಳೆಯುತ್ತಿದ್ದಾರಾ ಎಂದು ಕಾದುನೋಡಬೇಕು.

Exit mobile version