Site icon PowerTV

ಗ್ಯಾಸ್ ಸಿಲಿಂಡರ್ ದರ ಮತ್ತೆ 50 ರೂ. ಏರಿಕೆ

ನವದೆಹಲಿ : ಸಾಮಾನ್ಯರ ಪಾಲಿಗೆ ಅಡುಗೆ ದುಬಾರಿಯಾಗಿದೆ. ವಾಣಿಜ್ಯ ಎಲ್‌ಪಿಜಿ ನಂತರ ಈಗ ಗೃಹಬಳಕೆಯ LPG ಸಿಲಿಂಡರ್‌ ಬೆಲೆಯನ್ನೂ ಹೆಚ್ಚಿಸಲಾಗಿದೆ. 14.2 ಕೆಜಿ ಗೃಹಬಳಕೆಯ LPG ಸಿಲಿಂಡರ್‌ ಬೆಲೆ 50 ರೂ. ಹೆಚ್ಚಳವಾಗಿದೆ. ಈ ಹೆಚ್ಚಳವು ಇಂದಿನಿಂದ ಅಂದರೆ 7ನೇ ಮೇ 2022ರಿಂದ ಜಾರಿಗೆ ಬಂದಿದೆ.

ಇದೀಗ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ LPG ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ 999.50 ರೂ.ಗೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಮಾರ್ಚ್ 22ರಂದು ದೇಶೀಯ LPG ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಈ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

Exit mobile version