Site icon PowerTV

ಶೀಘ್ರ ಶಾಲಾರಂಭಕ್ಕೆ ಪೋಷಕರ ಮನವಿ

ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಭಾರಿ ಬಿಸಿಲು. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ತೀವ್ರ ತಾಪಮಾನ ಏರಿಕೆ ಹಾಗೂ ಬಿಸಿಲಿನ ಕಾರಣಕ್ಕೆ ಇನ್ನು ಎರಡು ವಾರಗಳ ಬಳಿಕ ಶಾಲೆ ಆರಂಭಿಸುವಂತೆ ಕೋರಿ ಕೆಲವು ಸಚಿವರು, ಪರಿಷತ್ ಸದಸ್ಯರು ಹಾಗೂ ಪೋಷಕರು ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮೇ 16ರಿಂದ ಶಾಲೆ ಆರಂಭ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಈಗಾಗಲೇ ತಿಳಿಸಿದೆ. ಕೊರೊನಾ ಕಾರಣದಿಂದ ಮಕ್ಕಳ ಕಲಿಕೆ ಹಿನ್ನಡೆಯಾಗಿರುವ ಕಾರಣ ಎರಡು ವಾರಗಳ ಬೇಸಿಗೆ ರಜೆ ಕಡಿತ ಮಾಡಿ ಮೇ 16ರಿಂದಲೇ ಶಾಲೆಗಳ ಆರಂಭಕ್ಕೆ ಮುಂದಾಗಿದೆ. ಆದರೆ ಶಾಲೆಗಳ ಆರಂಭ ಮೂಂದೂಡಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

Exit mobile version