Site icon PowerTV

ಜವರಾಯನ ಅಟ್ಟಹಾಸಕ್ಕೆ ಮೂವರು ಬಲಿ

ರಾಮನಗರ : ದೂರದೂರಿನಿಂದ ಕೆಲಸ ಹರಿಸಿ ಆತ ಕನಕಪುರಕ್ಕೆ ಬಂದಿದ್ದ. ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ಕುಟುಂಬದವರನ್ನ ಕರೆತರುತ್ತಿದ್ದ. ಆದ್ರೆ ಅಲ್ಲಿ ವಿಧಿಯಾಟವೇ ಬೇರೆ ಆಗಿತ್ತು. ಇನ್ನೇನೂ ಮನೆ ಸೇರವ ಹೊತ್ತಿಗೆ ಜವರಾಯ ತನ್ನ ಅಟ್ಟಹಾಸ ಮೆರೆದು 6 ತಿಂಗಳ ಹಸುಗೂಸು ಸೇರಿ ಮೂವರನ್ನ ಬಲಿ ಪಡೆದುಕೊಂಡಿದ್ದಾನೆ.

ಹೌದು ಬೆಳ್ಳಂಬೆಳಿಗ್ಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರಿನ ಬಳಿಯ ಕೆಮ್ಮಾಳೆ ಬಳಿ ಜವರಾಯ ತನ್ನ ಅಟ್ಟಹಾಕ್ಕೆ ಇನೋವಾ ಕಾರು ಹಾಗೂ ಕೆಎಸ್.ಆರ್.ಟಿ.ಸಿ ಬಸ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಮೂವರು ಮೃತಪಟ್ಟಿದ್ದಾರೆ‌. ಉಡುಪಿ ಮೂಲದ ಉಮೇಶ್ (29) ಅಕ್ಷತಾ (24) ಹಾಗೂ ಅಕ್ಷತಾಳ 6 ತಿಂಗಳ ಹಸುಗೂಸು ಸುಮಂತ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇತ್ತ ಅಕ್ಷತಾ ಪತಿ ಸುರೇಂದ್ರ ಹಾಗೂ 15 ವರ್ಷದ ನವನೀತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ನಿನ್ನೆ ಸಂಜೆ ಸುರೇಂದ್ರ ದಂಪತಿ ಉಡುಪಿಯಿಂದ ಬಾಡಿಗೆ ಕಾರಿನಲ್ಲಿ ಕನಕಪುರಕ್ಕೆ ಹೊರಟ್ಟಿದ್ರು. ಬೆಳಿಗ್ಗೆ 7.30 ಸುಮಾರಿಗೆ ಕನಕಪುರ ತಾಲೂಕಿನ ಸಾತನೂರು ತಲುಪಿದ್ರು ಇನ್ನೂ 10 ಕಿಲೋಮೀಟರ್ ಕ್ರಮಿಸಿದ್ರೆ ಆ ಕುಟುಂಬ ಕನಕಪುರ ತಲುಪುತಿತ್ತು ಆದ್ರೆ ಅಪಘಾತ ನಡೆದು ಮೂವರು ಸಾವನ್ನಪ್ಪಿದ್ದಾರೆ.

ಅಂದಹಾಗೇ ಸುರೇಂದ್ರ ಕಳೆದ 10 ವರ್ಷಗಳಿಂದ ಕನಕಪುರದ ರತ್ನ ಹೋಟೆಲ್​ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ರು. ತನ್ನ ಪತ್ನಿ ಅಕ್ಷತಾ ಜತೆಗೆ ಕನಕಪುರದಲ್ಲೇ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ರು. ಪತ್ನಿಯನ್ನ ಡೆಲಿವರಿಗೆ ಅಂತಾ ಉಡುಪಿಗೆ ಕಳುಹಿಸಿದ್ರು. 6 ತಿಂಗಳ ನಂತ್ರ ತನ್ನ ಹಸುಗೂಸು ಮಗ ಹಾಗೂ ಹೆಂಡತಿಯನ್ನ ಕನಕಪುರಕ್ಕೆ ಸುರೇಂದ್ರ ಕರೆತರುತ್ತಿದ್ರು. ಆದ್ರೆ ಕೆಮ್ಮಾಳೆ ಬಳಿ ದುರಂತ ನಡೆದು ಹೋಗಿತ್ತು. ಇತ್ತ ಕನಕಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಕ್ಷತಾ, ಅಕ್ಷತಾ ಮಗು ಹಾಗೂ ಚಾಲಕ ಉಮೇಶ್ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುರೇಂದ್ರ ಅವರ ತಲೆಗೆ ಗಾಯವಾಗಿದ್ದು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. 15 ವರ್ಷದ ನವನೀತ್ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ.

ಒಟ್ಟಾರೆ ಇಂದು ಬೆಳಿಗ್ಗೆ ಜವರಾಯ ತನ್ನ ಅಟ್ಟಹಾಸ ಮೆರೆದು ಮಗು ಸೇರಿ ಮೂವರನ್ನ ಬಲಿ ಪಡೆದುಕೊಂಡಿದ್ದಾನೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version