Site icon PowerTV

ಸುಪ್ರಭಾತ ಅಭಿಯಾನ ಯಾವುದೇ ಕಾರಣಕ್ಕೆ ನಿಲ್ಲಲ್ಲ : ಪ್ರಮೋದ್ ಮುತಾಲಿಕ್

ಮೈಸೂರು: ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ, ಅದು ಹೊರಸೂಸುವ ಶಬ್ದದ ವಿರುದ್ಧ ಸುಪ್ರಭಾತ ಅಭಿಯಾನ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕವಲಂದೆ ಚೋಟಾ ಪಾಕಿಸ್ತಾನ ಘೋಷಣೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮುಸ್ಲೀಮರ ಸೊಕ್ಕಿನ ವರ್ತನೆ ಮೌಲ್ವಿಯ ಪ್ರಚೋದನಕಾರಿ ಭಾಷಣದಿಂದ ಇದು ಆಗಿದೆ‌ ಪ್ರಮುಖವಾಗಿ ಮೌಲ್ವಿಯನ್ನು ಬಂಧಿಸಬೇಕು ಎಂದರು.

ಅದುವಲ್ಲದೇ, ಕೌಲಂದೆ ಭಾಗದಲ್ಲಿ ಶೇಕಡ 60 ಮುಸ್ಲಿಮರು ಇದ್ದಾರೆ. ಇದಕ್ಕಾಗಿ ಆ ರೀತಿಯ ವರ್ತನೆ ತೋರಿದ್ದಾರೆ. ಆಜಾನ್ ಪರ್ಯಾಯವಾಗಿ ಸುಪ್ರಭಾತ ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ, ಅದು ಹೊರಸೂಸುವ ಶಬ್ದದ ವಿರುದ್ಧ ಸುಪ್ರಭಾತ ಅಭಿಯಾನ ಯಾವುದೇ ಕಾರಣಕ್ಕೂ ನಿಲ್ಲಲ್ಲ ಹೀಗಾಗಿ ಮೇ 9 ರಿಂದ ಎಲ್ಲಾ ದೇವಸ್ಥಾನಗಳಲ್ಲೂ ಸುಪ್ರಭಾತ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ಇನ್ನು, ಸುರ್ಪೀಂಕೋರ್ಟ್ ಆದೇಶದಂತೆ ಹುಚ್ಗಣಿ ದೇವಸ್ಥಾನ ಹೊಡಿತಾರೆ. ಅದೇ ಆದೇಶದಂತೆ ಮಸೀದಿ ಮೈಕ್ ಯಾಕೆ ತೆಗೀತಿಲ್ಲ. ನಾವು ಯಾರ ಶಾಂತಿಗೂ ಭಂಗ ತರುವುದಿಲ್ಲ. ಶಾಂತಿ ಭಂಗವಾಗುತ್ತಿರುವುದು ಮುಸ್ಲಿಂರಿಂದ ಒಂದು ವೇಳೆ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ. ಸರ್ಕಾರದ ದುರ್ಬಲತೆಯಿಂದ ಈ ರೀತಿ ಆಗುತ್ತಿದೆ. ಹಿಂದೂಗಳು ನಿಮಗೆ ಮತ ಕೊಟ್ಟಿದ್ದು ಇದೆಲ್ಲವನ್ನು ಸರಿ ಮಾಡಲಿ ನಿಮಗೆ ಆಗಲಿಲ್ಲ ಅಂದರೆ ನಮಗೆ ಬಿಡಿ ಒಂದೇ ದಿನದಲ್ಲಿ ಎಲ್ಲಾ ಸದ್ದು ಅಡಗಿಸುತ್ತೇವೆ ಕೌಲಂದೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಇದಲ್ಲದಿದ್ದರೆ ಹಿಂದೂ ಸಂಘಟನೆಗಳಿಂದ ಕೌಲಂದೆ ಚಲೋ ಮಾಡಲಾಗುತ್ತೆ ಎಂದು ಮೈಸೂರಿನಲ್ಲಿ ಪ್ರಮೋದ್ ಮುತಾಲಿಕ್ ಎಚ್ಚರಿಕೆಯನ್ನು ನೀಡಿದ್ದಾರೆ.

Exit mobile version