Site icon PowerTV

ಮುಂದಿನ ದಿನಗಳಲ್ಲಿ ಮಂಡ್ಯ ಬಿಜೆಪಿ ಭದ್ರಕೋಟೆ – ಸಿ.ಟಿ ರವಿ

ಬೆಂಗಳೂರು: ತನಿಖೆ ಹಂತದಲ್ಲಿ ಯಾರು ನಿರಪರಾಧಿ ಅಂತಲೂ ಹೇಳಲ್ಲ, ತಪ್ಪಿತಸ್ತರು ಅಂತಲೂ ಹೇಳಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಚಿವ ಅಶ್ವಥ್ ನಾರಾಯಣ್ ಅವರ ವಿರುದ್ಧ ಆರೋಪದ ಬಗ್ಗೆ ಮಾತನಾಡಿದ ಅವರು, ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಸಿಎಂ‌ ಹೇಳಿದ್ದಾರೆ. ತನಿಖೆ ನಡೆಯುತ್ತಿದೆ ಎಲ್ಲವೂ ಹೊರಗೆ ಬರಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪಿತಸ್ತರಿಗೆ ಶಿಕ್ಷೆ ಆಗಲಿದೆ ಎಂದರು.

ಇನ್ನು ಇದೇ ವೇಳೆ ಮಂಡ್ಯದಲ್ಲಿ ಯುವ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಂಡ್ಯ ಗೆಲ್ಲದೇ ಬಿಜೆಪಿಗೆ ಗೆಲುವೇ ಆಗೋದಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯವನ್ನ ಬಿಜೆಪಿ ಭದ್ರಕೋಟೆ ಮಾಡಿಕೊಳ್ಳಲಿದ್ದೇವೆ ಎಂದು ನುಡಿದರು.

ಕಾಗಕ್ಕಾ, ಗೂಬಕ್ಕ ಕಥೆ ಹೇಳೋದು ಬೇಡ. ಯಾರ ಬಳಿ ಸಾಕ್ಷಿ ಇದೆ ಕೊಡಲಿ. ಸುಮ್ಮನೆ ಮಾತನಾಡೋದು ಬೇಡ. ತನಿಖಾ‌ ಸಂಸ್ಥೆ ಮೇಲೆ ನಂಬಿಕೆ ಇಲ್ಲದಿದ್ರೆ, ದಾಖಲೆ ಹೈಕೋರ್ಟ್‌ಗೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ. ಸಿದ್ದರಾಮಯ್ಯ ಅವರೇ ಕಿಂಗ್​ಪಿನ್ ಅಂತ ನಾನು ಹೇಳಲ್ಲ(?) ನಾನು ಆ ರೀತಿ‌ ಹೇಳಲ್ಲ, ತನಿಖೆ ನಡೆಯುತ್ತಿದೆ. ತನಿಖೆ ಹೋಗೋದು ಅಪಮಾನದ ಸಂಗತೀನಾ(?) ಎಂದು ಸಿ.ಟಿ ರವಿ ಮಾತನಾಡಿದ್ದಾರೆ.

Exit mobile version