Site icon PowerTV

ಕೋವಿಡ್ ಮಾರಣಹೋಮ; ಮೋದಿ ಸುಳ್ಳು ಲೆಕ್ಕ : ದಿನೇಶ್​​ ಗುಂಡುರಾವ್​​ ಟ್ವಿಟ್​​

ಬೆಂಗಳೂರು : ಕೋವಿಡ್​ನಲ್ಲಿ ಸಾವಿನ ಸುಳ್ಳು ಲೆಕ್ಕ ಕೊಟ್ಟು ಜಗತ್ತಿನ ಕಣ್ಣಿಗೆ ಮಣ್ಣೆರೆಚಿದ್ದ ಕೇಂದ್ರದ ಸುಳ್ಳಿನ ಬಂಡವಾಳ ಬೆತ್ತಲಾಗಿದೆ ಎಂದು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಅವರಿಂದು ಟ್ವೀಟ್ ಮಾಡಿದ್ದು, 2020-21ರಲ್ಲಿ ಭಾರತವೊಂದರಲ್ಲೇ ಕೋವಿಡ್-19 ಗೆ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಆದರೆ, ವಿಶ್ವದ ಮುಂದೆ ಮಾನ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಸತ್ತವರ ಸಂಖ್ಯೆ ಕೇವಲ 4.8 ಲಕ್ಷ ಎಂದು ಜನರ ಹಾದಿ ತಪ್ಪಿಸಿತ್ತು ಎಂದು ಕಿಡಿಕಾರಿದ್ದಾರೆ.

ಇನ್ನು ಕೋವಿಡ್ 2ನೇ ಅಲೆಯಲ್ಲಿ ಭಾರತ ಸಾವಿನ ಮನೆಯಾಗಿತ್ತು. ಗಂಗೆಯಲ್ಲಿ ಶವಗಳು ತೇಲಿದ್ದವು. ಆಕ್ಸಿಜನ್ ಇಲ್ಲದೆ ಸಾಲು ಸಾಲು ಹೆಣಗಳು ಬಿದ್ದವು. ಜನ ದೀಪದ ಹುಳುಗಳಂತೆ ಸಾಯುತ್ತಿದ್ದರೂ ಮೋದಿಯವರು ದೇಶ ಕೊರೋನಾ ವಿರುದ್ಧ ಗೆದಿದ್ದೆ ಎಂದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡರು. ಈ ಮೂಲಕ ಸಾವಿನ ಲೆಕ್ಕದ ಸತ್ಯ ಮರೆಮಾಚಿದ್ದರು. ಈಗ ವಿಶ್ವ ಆರೋಗ್ಯ ಸಂಸ್ಥೆ ವರದಿಯಿಂದ ಎಲ್ಲರಿಗೂ ಸತ್ಯ ದರ್ಶನವಾಗಿದೆ ಎಂದರು.

ಕೋವಿಡ್ ಸಾವಿನ ಸುಳ್ಳು ಲೆಕ್ಕ ಹೇಳಿದ ಮೋದಿ ಸರ್ಕಾರಕ್ಕೆ ಸತ್ತವರ ಮನೆಯ ಶಾಪ ತಟ್ಟದೇ ಇರದು. ಸುಳ್ಳು ಹೇಳಿ ಸತ್ಯವನ್ನು ಬಹಳ ದಿನ ಅದುಮಿಡಲು ಸಾಧ್ಯವಿಲ್ಲ ಎಂಬುದು ವಿಶ್ವಸಂಸ್ಥೆ ವರದಿಯಿಂದ ಸಾಬೀತಾಗಿದೆ. ಕೋವಿಡ್ ಕಾಲದಲ್ಲಿ ಕೇಂದ್ರದ ನಿರ್ಲಕ್ಷ್ಯ, ಮೋದಿ ಅವರ ಬಿಟ್ಟಿ ಪ್ರಚಾರದ ಹುಚ್ಚು 47 ಲಕ್ಷ ಜನರ ಸಾವಿಗೆ ಕಾರಣ. ಈ ಸಾವುಗಳಿಗೆ ಕೇಂದ್ರವೇ ಹೊಣೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

Exit mobile version