Site icon PowerTV

ರಕ್ತದ ವಾಂತಿ ಆದ್ರೂ ಛಲ ಬಿಡದ KGF ವಾರಿಯರ್ಸ್

ಬೆಂಗಳೂರು : ಸಾವಿರ ಕೋಟಿ ಗಳಿಕೆಯಿಂದ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್​ನಲ್ಲಿ ಹೊಸ ಇತಿಹಾಸ ಬರೆದ KGF- 2ನ ಮತ್ತೊಂದು ಮೇಕಿಂಗ್ ವಿಡಿಯೋ ರಿವೀಲ್ ಆಗಿದೆ.

ಈಗಾಗ್ಲೇ ಕ್ಯಾಮೆರಾ, ಮೇಕಪ್ ಹಾಗೂ ಕಾಸ್ಟ್ಯೂಮ್ ವಿಭಾಗಗಳ ಮೇಕಿಂಗ್ ಕಹಾನಿಯನ್ನ ಎರಡು ವಿಡಿಯೋಗಳ ಮೂಲಕ ತೆರೆದಿಟ್ಟಿತ್ತು ಚಿತ್ರತಂಡ. ಇದೀಗ ಆರ್ಟ್​ ಡೈರೆಕ್ಟರ್ ಶಿವಕುಮಾರ್ ಹಾಗೂ ಪ್ರೊಡಕ್ಷನ್ ಟೀಂ, ಎಂತಹ ಕ್ಲಿಷ್ಠ ಪರಿಸ್ಥಿತಿಗಳಲ್ಲೂ ಕೆಲಸ ಕೈ ಬಿಡದೆ, ಹಗಲಿರುಳು ದುಡಿದ ಆ ರೋಚಕ ಕಥೆಗಳ ಕಹಾನಿ ಬಹಿರಂಗ ಪಡಿಸಿದೆ.

ಪ್ರಶಾಂತ್ ನೀಲ್, ಯಶ್, ವಿಜಯ್ ಕಿರಗಂದೂರ್ ಅವ್ರ ಸಿನಿಮಾ ಕನಸನ್ನ ನನಸು ಮಾಡುವಲ್ಲಿ ಇಂತಹ ಸಾವಿರಾರು ತಂತ್ರಜ್ಞರ ಕೈಚಳಕವಿದ್ದು, ರಕ್ತದ ವಾಂತಿ ಮಾಡಿದ್ರೂ ಛಲ ಬಿಡದವರ ಕಥೆ ಇದಾಗಿದೆ.

Exit mobile version