Monday, August 25, 2025
Google search engine
HomeUncategorizedಯತ್ನಾಳ್​​ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗರಂ ಆದ ಸಿ ಎಂ ಬೊಮ್ಮಾಯಿ

ಯತ್ನಾಳ್​​ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗರಂ ಆದ ಸಿ ಎಂ ಬೊಮ್ಮಾಯಿ

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಹೊಸ ಯುವ ನಾಯಕತ್ವ ಹೊರ ಹೊಮ್ಮುವ ಲಕ್ಷಣಗಳು ಕಾಣುತ್ತಿದೆ ಹಾಗೂ ಬಿಜೆಪಿ ಪರವಾದ ಅಲೆ ಮುಂದೆ ಕಾಣಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 1 ರಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು 90ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರ ಜೊತೆ ಫೋನ್​​ನಲ್ಲಿ ನಾನು ಮಾತಾಡಿದ್ದೆ. ಇಂದು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇವೆ. ಅವರು ನೂರು ವರ್ಷಗಳ ಕಾಲ ಆರೋಗ್ಯವಂತರಾಗಿ ಬಾಳಲಿ ಮತ್ತು ನಮಗೆ ಮಾರ್ಗದರ್ಶನ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಇನ್ನು ಇದೇ ಪಕ್ಷದ ಪರ ಪ್ರತಿಕ್ರಿಯಿಸಿ, ರಾಜ್ಯದ ಎಲ್ಲ ಭಾಗದಿಂದಲೂ ಬಿಜೆಪಿಗೆ ಬರಲು ರೆಡಿ ಆಗಿದ್ದಾರೆ. ಅಲ್ಲದೇ ಕೋಲಾರ, ಮಂಡ್ಯದಿಂದಲೂ ಕೂಡ ಬರುತ್ತಿದ್ದಾರೆ.ಎಲ್ಲರನ್ನು ಬ್ಯಾಚ್ ವೈಸ್, ಪಕ್ಷ ಸೇರಿಸುವ ಪ್ರಕ್ರಿಯೆ ಆಗುತ್ತಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪಕ್ಷಕ್ಕೆ ಒಲವು ಇದೆ. ಯಾರು ನಮ್ಮ ಪಕ್ಷದ ಪರ ಒಲವು ತೋರಿಸಿದ್ದಾರೆ ಅವರನ್ನು ಪಕ್ಷ ಕರೆತರುವ ಕೆಲಸ ಮಾಡುತ್ತಿದೆ ಎಂದರು.

ಇನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ ಹಿನ್ನೆಲೆ ಅವರ ಬಗ್ಗೆ ಕೇಳುತ್ತಿದ್ದಂತೆ ಕೋಪಗೊಂಡು ಏನು ಮಾತಾಡದೆ ಸಿಎಂ ಬೊಮ್ಮಾಯಿ ತೆರಳಿದರು.

RELATED ARTICLES
- Advertisment -
Google search engine

Most Popular

Recent Comments