Site icon PowerTV

ಚಾಲಕನ ಅಜಾಗರೂಕತೆಯಿಂದ ಬಸ್ ಪಲ್ಟಿ : ಐವರಿಗೆ ಗಾಯ

ತುಮಕೂರು: ಚಾಲಕನ ಅಜಾಗರೂಕತೆಯಿಂದ ಬಸ್ ಪಲ್ಟಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬಾಚಿಹಳ್ಳಿ ಕ್ರಾಸ್ ಬಳಿ ನಡೆದಿದೆ.

ತಿಪಟೂರಿನಲ್ಲಿರುವ ಜಾಕಿ ಗಾರ್ಮೆಂಟ್ಸ್ ಗೆ ಮಹಿಳೆಯರನ್ನ ಕರೆದೊಯ್ಯುತ್ತಿದ್ದ ಬಸ್ ಇದಾಗಿದ್ದು,ಚಾಲಕನ ಅಜಾಗರೂಕತೆಯಿಂದ ಬಸ್ ಪಲ್ಟಿ ಹೊಡೆದಿದೆ. ಬಸ್ ಪಲ್ಟಿ ಹೊಡೆದ ರಭಸಕ್ಕೆ ಐವರಿಗೆ ಗಾಯಗಳಾಗಿದೆ. ಕೂದಲೆಳೆ ಅಂತರದಲ್ಲಿ ಭಾರ ಅನಾಹುತವೊಂದು ತಪ್ಪಿದ್ದು, ಬಸ್​​ನಲ್ಲಿದ್ದ ಇನ್ನುಳಿದ 11 ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳುಗಳನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version