Site icon PowerTV

ಬಿಬಿಎಂಪಿಗೆ ನೂತನ ಸಾರಥಿ..!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂತನ ಸಾರಥಿಯ ನೇಮಕವಾಗಿದ್ದಾರೆ.. ಬಿಬಿಎಂಪಿಯ ಆಡಳಿತದ ಚುಕ್ಕಾಣಿ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಕೈ ಸೇರಿದೆ.‌. ಇಷ್ಟು ದಿನ ಮುಖ್ಯ ಆಯುಕ್ತರಾಗಿದ್ದ ಗೌರವ್ ಗುಪ್ತ ವರ್ಗಾವಣೆ ಹಿನ್ನಲೆಯಲ್ಲಿ ತುಷಾರ್ ಗಿರಿನಾಥ್ ಬಿಬಿಎಂಪಿ ಚೀಫ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬಿಬಿಎಂಪಿ ನೂತನ ಮುಖ್ಯ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕರಿಸಿದ್ದಾರೆ.. ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ್ ಗುಪ್ತ, ತುಷಾರ್ ಗಿರಿನಾಥ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ರು.‌. ತುಷಾರ್ ಗಿರಿನಾಥ್ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡುವುದಕ್ಕೂ ಮುನ್ನ, ಪಾಲಿಕೆ ಆವರಣದಲ್ಲಿರುವ ಆದಿಶಕ್ತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು.‌. ಪಾಲಿಕೆ ಆವರಣದಲ್ಲಿನ ನಾಡಪ್ರಭು ಕೆಂಪೇಗೌಡ, ಡಾ.‌ಬಿ.ಆರ್.‌ಅಂಬೇಡ್ಕರ್, ಡಾ.‌ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ನಮನ‌ ಸಲ್ಲಿಸಿದ್ರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ.. ಅವುಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ‌ ಕೆಲಸ ಮಾಡುತ್ತೇನೆ..‌ ಎಲ್ಲಾ ಸಮಸ್ಯೆಗಳಿಗೂ‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.‌. ರಸ್ತೆ ಗುಂಡಿಗಳನ್ನ ಮುಚ್ಚಲು BWSSB, ಬೆಸ್ಕಾಂ ಸೇರಿ ಎಲ್ಲ ಇಲಾಖೆಗಳ ಜೊತೆ ಸಭೆ ನಡೆಸಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇನ್ನು, ತುಷಾರ್ ಗಿರಿನಾಥ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭಾಶಯ ತಿಳಿಸಿದ ಗೌರವ್​ ಗುಪ್ತಾ, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗೂ ಧನ್ಯವಾದ ತಿಳಿಸಿದ್ರು.‌. ನೂತನ ಆಯುಕ್ತರು ಪಾಲಿಕೆ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನ‌ ದೂರಮಾಡಿ ಉತ್ತಮ‌ ಆಡಳಿತ ನೀಡ್ತಾರೆ ಅಂತ ಭರವಸೆ ನೀಡಿದ್ರು.‌

ಪಾಲಿಕೆಯ ನೂತನ ಆಯುಕ್ತರ ಅಧಿಕಾರ ಸ್ವೀಕಾರ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಬಿಬಿಎಂಪಿಯ ಎಲ್ಲಾ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ರು.‌. ಒಟ್ನಲ್ಲಿ ಪಾಲಿಕೆಗೆ ನೂತನ ಸಾರಥಿಯಾಗಿರುವ ತುಷಾರ್ ಗಿರಿನಾಥ್ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಲಿ, ಉತ್ತಮ‌ ಆಡಳಿತ ನೀಡಲಿ ಅನ್ನೋದು ಪವರ್ ಟಿವಿಯ ಆಶಯ..

Exit mobile version