ಬೆಂಗಳೂರು: ನಾಲ್ಕು ವರ್ಷ ಕಾಂಗ್ರೆಸ್ನವರೆಲ್ಲಾರೂ ಮಲಗಿದ್ದರು, ಈಗ ಚುನಾವಣೆ ಹತ್ತಿರ ಬರುವಾಗ ನಾವು ಜೀವಂತವಾಗಿ ಇದ್ದೇವೆ ಎಂದು ಅವರು ತೋರಿಸಿಕೊಳ್ಳುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.
PSI ನೇಮಕಾತಿ ಪರೀಕ್ಷೆ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆ ಎದ್ದ ಕೂಡಲೇ ಡಿಕೆ ಶಿವಕುಮಾರ್ ಅವರು, ಅಶ್ವಥ್ ನಾರಾಯಣ್, ಅಶ್ವಥ್ ನಾರಾಯಣ್ ಅನ್ನೋದು ಯಾಕೆ..? ಸರ್ಕಾರ ಸಮರ್ಪಕವಾಗಿದೆ, ಸಿಎಂ ಸಮರ್ಥವಾಗಿದ್ದಾರೆ. ಅವರ ತಮ್ಮ ಆಗಲಿ, ಇನ್ನೊಬ್ಬನೇ ಆಗಲಿ, ತನಿಖೆ ಕೈಗೊಂಡು ಕ್ರಮ ಜರುಗಿಸುತ್ತೇವೆ ಎಂದರು.
ಇನ್ನು ಪ್ರಿಯಾಂಕಾ ಖರ್ಗೆಗೆ ಏನು ನೋಟಿಸ್ ಕೊಡಬಾರಾದಾ..? ಅವನು ಏನು ಒಬ್ಬ ದೊಡ್ಡ ಲೀಡರಾ..? ಸುದ್ದಿಗೋಷ್ಠಿ ಮಾಡಿ ಹೇಳೋಕೆ ಆಗುತ್ತೆ ? ಆರೋಪಕ್ಕೆ ತಕ್ಕಂತೆ ದಾಖಲೆ ಕೊಡಲು ತಾಕತ್ತು ಇಲ್ವೇ..? ಅವನಿಗೆ ಸೂಕ್ತ ದಾಖಲೆ ಕೊಡೋಕೆ ಏನು? ಅವನು ಏನು..? ಎಂದು ಪ್ರಿಯಾಂಕಾ ಖರ್ಗೆ ವಿರುದ್ದ ಸೋಮಶೇಖರ್ ಅವರು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.


