KPSC SCAM : ‘ಡಿಕೆಶಿ ಮೊದಲು ತಮ್ಮ ಮನೆ ಸ್ವಚ್ಛ ಮಾಡಿಕೊಂಡು ಹೋರಾಡಲಿ’

ಉತ್ತರಕನ್ನಡ : ಕೆಪಿಎಸ್​​ಸಿ ನೇಮಕಾತಿಯಲ್ಲಿ ಡಿ ಕೆ ಸುರೇಶ ವಿರುದ್ಧ ಲಂಚದ‌ ಆರೋಪದಡಿ ತಕ್ಷಣ ರಾಜೀನಾಮೆ‌ ಪಡೆದು ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಪವರ್ ಟಿ.ವಿ ನಿನ್ನೆಯಿಂದ ಡಿ.ಕೆ ಸುರೇಶ್​​ನ ಲಂಚವತಾರದ ಕುರಿತು ನಿರಂತರ ವರದಿ ಬಿತ್ತರಿಸಿತ್ತು. ವರದಿ ಗಮನಿಸಿದ ಉತ್ತರಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದ್ದು, ಕೆಪಿಎಸ್​​ಸಿ ನೇಮಕಾತಿಯಲ್ಲಿ ಲಂಚದ‌ ಆರೋಪ ಹಿನ್ನೆಲೆಯಲ್ಲಿ ಸಂಸದರಾಗಿರುವ ಕಾರಣ ತಕ್ಷಣ ಅವರಿಂದ ರಾಜೀನಾಮೆ‌ ಪಡೆದು ತನಿಖೆ ನಡೆಸಬೇಕು ಎಂದು ಕಿಡಿಕಾರಿದರು.

ಇನ್ನು ಅವರಿಂದ ರಾಜೀನಾಮೆ ‌ಪಡೆಯದೆ ತನಿಖೆ ನಡೆಸುವುದು ‌ಕಷ್ಟ. ಅಲ್ಲದೇ ಡಿ ಕೆ ಶಿವಕುಮಾರ್ ಅವರು ಬೇರೆ ಬೇರೆ ಹೋರಾಟ ಮಾಡುತ್ತಿದ್ದಾರೆ. ಅದರ ಬದಲು ಮೊದಲು ಅವರ ಮನೆಯನ್ನು ಸ್ವಚ್ಛ ಮಾಡಿಕೊಂಡು ತದನಂತರ ಹೋರಾಟ ಮಾಡಲಿ ಮತ್ತು ಮೊದಲು ಅವರ ಸಹೋದರನಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES