Site icon PowerTV

ಬಾಯಿಗೆ ಬಂದಂಗೆ ಮಾತಾಡೋದಲ್ಲ : ಶಾಸಕ ರಾಜುಗೌಡ

ಕಲಬುರಗಿ : ನಾನು 25 ವರ್ಷದವನಾಗಿದ್ದಾಗಲೇ ಕನ್ನಡನಾಡು ಪಕ್ಷದಿಂದ ಶಾಸಕನಾಗಿದ್ದೆ ಎಂದು ಕಲಬುರಗಿಯಲ್ಲಿ ಸುರಪುರ ಬಿಜೆಪಿ ಶಾಸಕ ರಾಜುಗೌಡ ಸಚಿವ ಬಿ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮಿಂದಲೇ ಬೆಳೆದಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಎಲ್ಲಾದರೂ ಏನಾದರು ಮಾತಾಡಬೇಕು ಅಂದ್ರೆ ಅದಕ್ಕೆ ಅರ್ಥ ಇರಬೇಕು. ಯಾರೋ ಏನೋ ಪ್ರಶ್ನೆ ಕೇಳ್ತಾರೆ ಅಂತಾ ಬಾಯಿಗೆ ಬಂದಂಗೆ ಹೇಳೊದಲ್ಲ ಎಂದು ಕಿಡಿಕಾರಿದರು.

ಇನ್ನು ನಾನು 25 ವರ್ಷದವನಾಗಿದ್ದಾಗಲೇ ಕನ್ನಡನಾಡು ಪಕ್ಷದಿಂದ ಶಾಸಕನಾಗಿದ್ದೆ, ಕನ್ನಡನಾಡು ಪಕ್ಷ ಅಂದಮೇಲೆ ಅದು ಇಂಡಿಪೆಂಡೆಂಟ್.ಹಾಗಾದ್ರೆ ಇವರೆಲ್ಲಿ ನನಗೆ ನಾಯಕರಾಗ್ತಾರೆ? ಈ ಥರ ಹೇಳಿಕೆ ನೀಡುವುದು ಸರಿಯಲ್ಲ, ಜನರು ಹುಷಾರಿದ್ದಾರೆ.  ನಿಮ್ಮ ಕುಟುಂಬದಲ್ಲೆ ಮೂವರು ಚುನಾವಣೆಯಲ್ಲಿ ಸೋತಿದ್ದು ನೆನಪಿದೆಯಾ ರಾಮುಲು’ಅಣ್ಣಾ? ನಿಮ್ಮ ಸಹೋದರಿಯೇ ಎಂಪಿ ಚುನಾವಣೆಯಲ್ಲಿ ಸೋತಿದ್ರು, ಅವರ ಮೇಲೆ ನಿಮ್ಮ ಪ್ರಭಾವ ಬೀರಿಲ್ವ? ನಾನು ಇವತ್ತು ಏನಾಗಿದ್ದರೂ ಸುರಪುರ ಕ್ಷೇತ್ರದ ಮತದಾರರ ಆಶೀರ್ವಾದದ ಮೇಲಿದ್ದೀನಿ ಹೊರೆತು, ನಿಮ್ಮ ಕೃಪಾರ್ಶಿವಾದದ ಮೇಲೆ ಅಲ್ಲ ಎಂದು ಸಚಿವ ರಾಮುಲವಿಗೆ ಶಾಸಕ ರಾಜುಗೌಡ ಖಡಕ್​​ ಆಗಿ ಹೇಳಿದರು.

Exit mobile version