Site icon PowerTV

ಸಿದ್ದರಾಮಯ್ಯ ಮಹಾನ್ ನಾಯಕ : ಹೆಚ್​​ಡಿಕೆ

ಮೈಸೂರು : 12 ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣದ ಮೂಲಕ ಸಿದ್ದರಾಮಯ್ಯನವರು ಒಂದು ದಿನಕ್ಕಾದರೂ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನ ಮೇಲೆ ಆರೋಪಿಸಿದರು.

ಈಶ್ಚರಪ್ಪ ಬದಲು ಹೆಚ್ ಡಿ ಕುಮಾರಸ್ವಾಮಿ ಬಂಧಿಸಬೇಕಾ.? ಎಂಬ ವಿಪಕ್ಷ ನಾಯಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಚಪಲಕ್ಕೂ ಅಥವಾ ಯಾರಿಗೋ ತೊಂದರೆ ಕೊಡಲು ಮಾತನಾಡುವುದಿಲ್ಲ. ಸುಳ್ಳಿನ ರಾಮಯ್ಯ ಹೇಳಿಕೆ ನಾನು ನೋಡಿದೆ ಎಂದು ಮತ್ತೆ ಸುಳ್ಳಿನ ರಾಮಯ್ಯ ಹೆಸರನ್ನು ಪುನರುಚ್ಚಿಸಿದರು.

ಅಲ್ಲದೇ ಸಿದ್ದರಾಮಯ್ಯ ಒಬ್ಬ ಮಹಾನ್ ನಾಯಕ. ಹುಟ್ಟಿದಾಗಿನಿಂದಲೂ ಜಾತ್ಯಾತೀತ ಶಕ್ತಿಗಳನ್ನು ಬೆಳೆಸಿದ್ದಾರಾ.? ಈ ಸರ್ಕಾರ ಬರಲು ಅವರೇ ಕಾರಣ. ಮಾತೆತ್ತಿದರೆ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾರೆ. ನಾನು ಜಾತಿ ಬಳಸಿ ಅಧಿಕಾರ ಮಾಡಲಿಲ್ಲ. ಮತ್ತೆ ಸುಳ್ಳಿನ ರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಹಾಗಿದ್ದರೇ ಅರ್ಕಾವತಿ ಡೀಲ್ ಏನಾಯ್ತು.? 2008 ರಲ್ಲಿ ಸಿಎಂ ಸುಳ್ಳಿನ ರಾಮಯ್ಯ ಒಟ್ಟಿಗೆ ಮಾತನಾಡಿಕೊಂಡು ಬಂದರು. ಒಂದೇ ಹೆಲಿಕಾಪ್ಟರ್‌ನಲ್ಲಿ ಬಂದಾಗ ಏನು ಮಾತನಾಡಿದರು..?ಆಗ ನೀವು ಬಿಜೆಪಿ ಬಿ ಟೀಂ ಆಗಿರಲಿಲ್ಲವಾ.? ಎಂದು ಮತ್ತೆ ಸಿದ್ದರಾಮಯ್ಯ ವಿರುದ್ದ ಹೆಚ್​ಡಿಕೆ ವಾಗ್ದಾಳಿ ನಡೆಸಿದರು.

Exit mobile version