Site icon PowerTV

ಬೆನ್ನಿಗೆ ಚೂರಿ ಹಾಕೋ ರಾಜಕಾರಣ ‌ಮಾಡಬಾರದು : ಹೆಚ್​​ಡಿಕೆ

ಹಾಸನ :  ಬೇರೆ ಏನಾದ್ರು ರಾಜಕಾರಣ ಮಾಡೋಣ ಆದ್ರೆ ಬೆನ್ನಿಗೆ ಚೂರಿ ಹಾಕೋ ರಾಜಕಾರಣ ‌ಮಾಡಬಾರದು ಎಂದು ತಮ್ಮದೇ ಪಕ್ಷದ ಶಾಸಕ ಶಿವಲಿಂಗೇಗೌಡ ವಿರುದ್ದ ಮಾಜಿ ಪ್ರಧಾನಿ ದೇವೇಗೌಡ , ಹೆಚ್ ಡಿ  ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು ತಮ್ಮದೇ ಪಕ್ಷದ  ಶಾಸಕನನ್ನು ಬಹಿರಂಗ ವೇದಿಕೆಯಲ್ಲಿ ಜರಿದರು. ಕುಮಾರಸ್ವಾಮಿ ಮಾತಾಡೋವಾಗ ಮೈಕ್ ಪಡೆದು ಮಾತನಾಡಿದ ದೇವೇಗೌಡರು ನಾನು ತೆಂಗಿನ ವಿಚಾರವಾಗಿ ಧರಣಿ ಮಾಡ್ತೀನಿ ನೀವು ಮೂರು ದಿನ ಬಿಟ್ಟು ಬಂದು ಏಳಿಸಿ ಎಂದು ಹೇಳಿದರು.

ಅಬ್ಬಾ ಎಂತಾ ಡ್ರಾಮಾ, ಬಹುಶಃ ಇಂತಾ ಒಬ್ಬರು ಈ ಜಿಲ್ಲೆಯಲ್ಲಿ ಮತ್ತೆ ಹುಟ್ಟಲಾರರು. ಹೌದು ನನಗೆ ಗೊತ್ತು ವಿಧಾನಸಭೆಯಲ್ಲಿ ಮಾತಾಡೋದು ಡ್ರಾಮಾನೇ. ಕ್ಷೇತ್ರದ ಜನ ನೋಡಲಿ ಅಂತಾ ಡ್ರಾಮಾ ಮಾಡ್ತಾರೆ ಎಂದು  ದೇವೇಗೌಡರ ಮಾತಿಗೆ ಹೆಚ್​ಡಿಕೆ ಧ್ವನಿಗೂಡಿಸಿದರು.

Exit mobile version