Site icon PowerTV

ಮೋದಿ 3,600ಕೋಟಿ ದೋಚಿದ್ದಾರೆ : ಸಿದ್ದರಾಮಯ್ಯ

ಮೈಸೂರು:  ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಅಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಂತ್ರ ಬಂದು 75 ವರ್ಷ ಆಗುವ ವೇಳೆಯಲ್ಲಿ ದೇಶದ ಸಾಲವನ್ನ ದುಪ್ಪಟ್ಟು ಮಾಡಿದ್ದಾರೆ ಅಷ್ಟೇ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ರಸಗೊಬ್ಬರ ಬೆಲೆಗಳು ಗಗನಕ್ಕೆ ಏರಿದೆ. ನರೇಂದ್ರ ಮೋದಿ ಅವರು ರೈತರ ಜೇಬಿನಿಂದ 3,600ಕೋಟಿ ದೋಚಿದ್ದಾರೆ’ ಎಂದು ಆಕ್ರೋಶ ಹೊರ ಹಾಕಿದರು. ಅಂಬಾನಿ, ಅದಾನಿ ಸಂಪತ್ತು ಮಾತ್ರ ಏರಿಕೆ ಆಗಿದೆ‌. ಅಂಥವರ ಸಾಲ ಮನ್ನಾವನ್ನೂ ಮಾಡಿದ್ದಾರೆ. ಇವರು ಯಾರ ಪರ ಇದ್ದಾರೆ ಎಂದರು.

ಅದುವಲ್ಲದೇ ಕಾರ್ಪೊರೇಟ್ ಟ್ಯಾಕ್ಸ್ ಡಾ. ಮನಮೋಹನ್ ಸಿಂಗ್ ಕಾಲದಲ್ಲಿ 35% ಇತ್ತು, ಈಗ 23%ಗೆ ಇಳಿಸಿದ್ದಾರೆ. ಕೇಂದ್ರಕ್ಕೆ ಇದರಿಂದ 5 ಲಕ್ಷ ಕೋಟಿ ಕಡಿಮೆ ಆಯ್ತು. ಇದೆಲ್ಲ ಸುಳ್ಳು ಎನ್ನುವುದಾದರೆ ಒಂದೇ ವೇದಿಕೆಗೆ ಚರ್ಚೆಗೆ ಬರಲಿ’ ಎಂದು ಪ್ರಧಾನಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.

Exit mobile version