Site icon PowerTV

ಜನರಿಗೆ ಒಳ್ಳೆಯದಾಗಬೇಕು ಅಂದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು : ತನ್ವೀರ್ ಸೇಠ್

ಮೈಸೂರು : ಸರ್ಕಾರದ ನ್ಯೂನ್ಯತೆ ಮುಚ್ಚಲು ತನ್ನ ಅಂಗ ಸಂಸ್ಥೆಗಳನ್ನು ಬಳಸಿಕೊಂಡು ಜನರ ದಾರಿ ತಪ್ಪಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ ಎಂದು ಮೈಸೂರಿನಲ್ಲಿ ತನ್ವೀರ್‌ಸೇಠ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೂ ಮುನ್ನ ಮಾಜಿ ಸಚಿವ ಈಶ್ವರಪ್ಪ ಹೆಸರು ಬರೆದಿದ್ದಾರೆ. ಅವರ ರಾಜೀನಾಮೆ ಆಗ್ರಹಿಸಿ ಮಾಡಿದ ಧರಣಿಗೆ ಅವರ ರಾಜೀನಾಮೆ ಆಗಿದೆ. ಈಶ್ವರಪ್ಪ ವಜಾಕ್ಕೆ ರಾಜ್ಯಪಾಲರಿಗೆ ಗೃಹ ಸಚಿವರು ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ತಾಕತ್ತಿದ್ದರೆ 40% ಕಮಿಷನ್ ವಿಚಾರ ತನಿಖೆ ಮಾಡಲಿ. ಈ ಎಲ್ಲ ವಿಚಾರಗಳ ಬಗ್ಗೆ ಸರ್ಕಾರ ತನ್ನ ಸ್ಪಷ್ಟ ನಿಲುವು ತಿಳಿಸಬೇಕು. ಈ ರಾಜ್ಯದ ಜನರಿಗೆ ಒಳ್ಳೆಯದಾಗಬೇಕು ಅಂದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು.

Exit mobile version