Site icon PowerTV

ಒಂದು ವರ್ಷ ಮನೆ ಸೇರಲ್ಲ : ಬಿ. ಎಸ್. ಯಡಿಯೂರಪ್ಪ

ದಾವಣಗೆರೆ : ಮುಂದಿನ ಒಂದು ವರ್ಷ ನಾನು ಮನೆ ಸೇರಲ್ಲ ರಾಜ್ಯಾದ್ಯಂತ ಓಡಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬೆಣ್ಣೆನಗರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬಹುದು.  ಆದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನನಗೆ ಸಿಎಂ ಸ್ಥಾನದಷ್ಟೆ ಗೌರವ ಸಿಗುತ್ತಿದೆ. ಅಲ್ಲದೇ ಮೋದಿಯವರು ಬರುವ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯನ್ನ ಕೊಟ್ಟಿದ್ದಾರೆ. ಹೀಗಾಗಿ ನಾನು ಸೇರಿದಂತೆ ಪಕ್ಷದ ಯಾವ ನಾಯಕರು ಸಹ ವಿಶ್ರಮಿಸಲ್ಲ‌‌ ಎಂದು ತಿಳಿಸಿದರು.

ಇನ್ನು ಒಂದು ವರ್ಷ ಕಾರ್ಯಕರ್ತರು ಮನೆ ಸೇರದೇ ಕೆಲಸ ಮಾಡಬೇಕು. ವಾತಾವರಣದ ನಿರೀಕ್ಷೆಗೂ ಮೀರಿ ಬಿಜೆಪಿಗೆ ಇದೆ. ಪ್ರತಿ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರು ಬಿಜೆಪಿಯ ಶಕ್ತಿಯಾಗಿದ್ದಾರೆ. ಕಾಂಗ್ರೆಸ್​​ನವರು ಹಗುರವಾಗಿ ಮಾತನಾಡುತ್ತಿದ್ದಾರೆ. ಆದರೆ ಅವರ ಪಕ್ಷವು ಎಲ್ಲಾ ಕಡೆ ಸೋತಿದ್ದು, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಲ್ಪ ಸ್ವಲ್ಪ ಉಸಿರಾಡುತ್ತಿದೆ. ಬರುವ ಚುನಾವಣೆ ಬಳಿಕ ಆ ಉಸಿರಾಟವು ನಿಂತು ಹೋಗುತ್ತದೆ. ಇದು ನಮ್ಮ‌ ಸಂಕಲ್ಪವಾಗಿದೆ ಎಂದು ಬಿಎಸ್​​ವೈ ಹೇಳಿದರು.

Exit mobile version