Site icon PowerTV

ಸಿಲಿಕಾನ್​​ ಸಿಟಿ ಈಗ ಕರೆಪ್ಶನ್ ಕ್ಯಾಪಿಟಲ್ ಇಂಡಿಯಾ : ಶಾಸಕ ಅಜಯ್ ಸಿಂಗ್

ಬೆಂಗಳೂರು : ಇಡೀ ದೇಶದಲ್ಲಿ ಬೆಂಗಳೂರು ಅಂದರೆ ಸಿಲಿಕಾನ್ ವ್ಯಾಲ್ಯೂ ಅಂತ ಇತ್ತು.ಮತ್ತು ಕ್ಯಾಪಿಟಲ್ ಸಿಟಿ ಅಂತ ಬೆಂಗಳೂರು ಹೆಸರಾಗಿತ್ತು. ಆದರೆ ಬಿಜೆಪಿ ಸರ್ಕಾರದಿಂದ ಕರೆಪ್ಶನ್ ಕ್ಯಾಪಿಟಲ್ ಇಂಡಿಯಾ ಅಂತ ಆಗಿದೆ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಆಡಳಿತ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಗರದಲ್ಲಿಂದು ಮಾತನಾಡಿದ ಅವರು ದಿವ್ಯಾ ಹಾಗರಗಿ ಬಿಜೆಪಿಯ ಮಹಿಳಾ ಮುಖಂಡೆ ಈಗಾಗಲೇ PSI ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ದಿವ್ಯಾ ನಾಪತ್ತೆ ಆಗಿದ್ದಾರೆ. ಸರ್ಕಾರ ದಿವ್ಯಾ ಅವರನ್ನು ಪ್ರೊಟೆಕ್ಟ್ ಮಾಡುತ್ತಿದೆ ಎಂದು ಸರ್ಕಾರದ ಮೇಲೆ ಆರೋಪ ಮಾಡಿದರು.

ದಿವ್ಯಾ ಹಾಗರಗಿ ಸಂಬಂಧಿಸಿದಂತೆ ಪೊಲೀಸರ ಬಳಿ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ದಿವ್ಯಾಳನ್ನು ಅರೆಸ್ಟ್ ಮಾಡಲೇ ಬೇಕು. ಇಲ್ಲ ಅಂದ್ರೆ ರಾಜ್ಯದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ. ಈಗಾಗಲೇ 10 ದಿನ ಆಗಿದೆ ದಿವ್ಯಾಗಳನ್ನು ಹಿಡಿದಿಲ್ಲ. ಬಿಜೆಪಿ ಮುಖಂಡ ಆಗಿರುವುದಕ್ಕೆ ಹಿಡಿಯೋಕೆ ಹಿಂದೆ ಮುಂದೆ ಮಾಡ್ತವ್ರಾ..?ಇದರಲ್ಲಿ ಬಿಜೆಪಿ ನಾಯಕರ ಕೈವಾಡ ಇದ್ಯಾ..? ಅದು ಗೊತ್ತಾಗಬೇಕು. ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.

ಇನ್ನು 40% ಕಮೀಷನ್​​ನಿಂದ ಒಬ್ರು ಪ್ರಾಣ ಹೊಯ್ತು. ಮಠಕ್ಕೆ ಕೊಡುವ ಅನುದಾನಲ್ಲೂ ಕಮೀಷನ್ ತಗೋತಾರೆ ಅಂದರೆ ಯಾವ ಮಟ್ಟದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ. ಜನ ಕೂಡ ಈ ಸರ್ಕಾರವನ್ನು ಕಿತ್ತು ಒಗೆಯೋಕೆ ಕಾಯುತ್ತಿದ್ದಾರೆ ಎಂದು ಗುಡುಗಿದರು.

Exit mobile version