Site icon PowerTV

ಡಿಕೆಶಿಯನ್ನು ಅಣ್ಣಾ ಹಜಾರೆಗೆ ಹೋಲಿಸಿದ ಸಿ ಟಿ ರವಿ

ವಿಜಯನಗರ : ಡಿ ಕೆ ಶಿವಕುಮಾರ್​​ ಅವರಂಥ ಪ್ರಾಮಾಣಿಕ ವ್ಯಕ್ತಿ ಎಲ್ಲಾದರೂ ಸಿಕ್ತಾರಾ? ಎಂದು  ಬಿಜೆಪಿಯ ಸಿ ಟಿ ರವಿ ವಿರೋಧ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​ ಅವರ ಕಾಲೆಳೆದಿದ್ದಾರೆ.

ಇಂದು ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನಲೆ ವಿಜಯನಗರದ ಹೊಸಪೇಟೆಗೆ ತೆರಳಿರುವ  ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಕೆಶಿ ಒಬ್ಬ ಪ್ರಾಮಾಣಿಕ ವ್ಯಕ್ತಿ. ಅವರಲ್ಲಿ ಅಣ್ಣಾ ಹಜಾರೆ ಚಾರ್ಮ್ ಇದೆ. ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಅವರಂಥ ಪ್ರಾಮಾಣಿಕ ವ್ಯಕ್ತಿ ಎಲ್ಲಾದ್ರೂ ಸಿಕ್ತಾರಾ? ಡಿಕೆಶಿ ದೇಶಕ್ಕಾಗಿ ಜೈಲಿಗೆ ಹೋಗಿ ಬಂದವರು. ಡಿಕೆಶಿ ತ್ಯಾಗಮೂರ್ತಿ. ಅವರಂಥವರು ಭ್ರಷ್ಟಾಚಾರದ ಬಗ್ಗೆ ಮಾತಾಡೋದರಲ್ಲಿ ಅರ್ಥ ಇದೆ ಎಂದು ಡಿಕೆಶಿ ಬಗ್ಗೆ ವ್ಯಂಗವಾಡಿದ್ದಾರೆ.

ಇನ್ನು ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಆದಂತಹ ಅರ್ಕಾವತಿ ರೀಡೂ ಕೇಸ್ ತನಿಖೆ ಮಾಡಲಿ. ಅದರಲ್ಲಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ತಿಳಿಯುತ್ತದೆ. ಆದ್ದರಿಂದ ಪುನಃ ರೀಡೂ ಕೇಸ್ ಅನ್ನು ಸಿಎಂ ಓಪನ್ ಮಾಡಿ ತನಿಖೆ ಮಾಡಬೇಕು ಮತ್ತು ಅಂತ ನಾನು ಸಿಎಂಗೆ ಆಗ್ರಹಿಸುತ್ತೇನೆ ಎಂದು ಸಿ ಟಿ ರವಿ ಕಿಡಿಕಾರಿದರು.

Exit mobile version