Site icon PowerTV

ಆ್ಯಕ್ಟರ್ ರೋಜಾ ಈಗ ಮಿನಿಸ್ಟರ್..!

ಆಂಧ್ರ ಪ್ರದೇಶ: ಬಹುಭಾಷಾ ನಟಿ ರೋಜಾ ಈಗ ಮಂತ್ರಿಯಾಗಿದ್ದಾರೆ. ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿ ರೋಜಾ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕ್ರೀಡಾ ಖಾತೆ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

20 ವರ್ಷಗಳ ಕಾಲ ರಾಜಕೀಯ ಏಳುಬೀಳುಗಳನ್ನು ಕಂಡ ರೋಜಾ ಕೊನೆಗೂ ಮಂತ್ರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪುಟ ಪುನಾರ್ರಚನೆ ವೇಳೆ ಕೊನೆ ಕ್ಷಣದಲ್ಲಿ ರೋಜಾ ಅವರಿಗೆ ಅದೃಷ್ಠ ಒಲಿದಿದೆ. ಜಗನ್ ಸರ್ಕಾರದಲ್ಲಿ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕ್ರೀಡಾ ಖಾತೆ ಮಂತ್ರಿಯಾಗಿರುವ ರೋಜಾ ಕೊರೊನಾದಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿತ್ತು ಇದೀಗ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರಕ್ಕೆ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ರಾಜಕೀಯದಲ್ಲಿ ರೋಜಾ ರವನ್ನು ಐರನ್ ಲೆಗ್ ಎಂದು ಹೀಗಳಿಯುತ್ತಿದ್ದವರಿಗೆ ರೋಜಾ ಮಂತ್ರಿಯಾಗೋ ಮೂಲಕ ತಿರುಗೇಟು ಕೊಟ್ಟಿದ್ದಾರೆ.

Exit mobile version