Site icon PowerTV

ಇಂದೇ ಕೊನೆಯಾಗುತ್ತಾ ಈಶ್ವರಪ್ಪ ಸಚಿವಸ್ಥಾನದ ದರ್ಬಾರ್..?

ಬೆಂಗಳೂರು : ಈಶ್ವರಪ್ಪ ಪ್ರಕರಣವು ಈಗ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖವಾದ ಅಸ್ತ್ರವಾದ್ದರಿಂದ ಸಚಿವ ಕೆ.ಎಸ್. ಈಶ್ವರಪ್ಪ ಇಂದೇ ರಾಜೀನಾಮೆ ನೀಡುವ ಸಾಧ್ಯತೆಗಳಿದೆ.

ಗುತ್ತಿಗೆದಾರ ಸಂತೋಷ ಪಾಟೀಲ್​​ ಆತ್ಮಹತ್ಯೆಗೆ ಈಶ್ವರಪ್ಪ ಕಾರಣ ಮತ್ತು 40% ಕಮಿಷನ್​​ ಆರೋಪ ಹಿನ್ನಲೆ ಸಚಿವರಿಗೆ ರಾಜೀನಾಮೆ ಪಡೆಯುವಂತೆ ಒತ್ತಡ ಹೆಚ್ಚಾಗುತ್ತಿದೆ. ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ‌ ಮೇಲೂ ಸಹ  ಒತ್ತಡ ಹೆಚ್ಚಾಗಿದೆ. ರಾಜೀನಾಮೆ ತಡವಾದಷ್ಟು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಬಹಳ ಮುಜುಗರ ಉಂಟಾಗುತ್ತದೆ.

ಅದುವಲ್ಲದೇ ರಾಜೀನಾಮೆ ತಡವಾದಷ್ಟೂ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ. ಹೀಗಾಗಿ ಇಂದು ಕಾಂಗ್ರೆಸ್ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಹಾಗು ಹಲವು ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲಿದ್ದಾರೆ.

ಇನ್ನು ಕಾಂಗ್ರೆಸ್ ಕೈಯಲ್ಲಿರುವ ಅಸ್ತ್ರವನ್ನು ಕಸಿದುಕೊಳ್ಳಲು ಈಶ್ವರಪ್ಪನವರಿಂದ ರಾಜೀನಾಮೆ ಪಡೆಯುವುದೇ ಸೂಕ್ತ ಎಂದು ಬಿಜೆಪಿಯ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮತ್ತು ಆರ್ ಎಸ್ ಎಸ್ ನಾಯಕರಿಂದಲೂ ಸಿಎಂ ಬೊಮ್ಮಾಯಿ‌ಗೆ ಸಲಹೆ ಕೊಟ್ಟಿದ್ದಾರೆ.

ಹೀಗಾಗಿ ಹೈಕಮಾಂಡ್ ನಾಯಕರಿಗೆ ಈಗಾಗಲೇ ಮಾಹಿತಿ ನೀಡಿದ್ದು, ಸೂಚನೆ ಬರುತ್ತಿದ್ದಂತೆ ಸಿಎಂ ಈಶ್ವರಪ್ಪ ರಾಜೀನಾಮೆ ಪಡೆಯಲಿದ್ದಾರೆ. ಒಟ್ಟಿನಲ್ಲಿ ಇಂದೇ ಈಶ್ವರಪ್ಪನವರ ಸಚಿವಸ್ಥಾನದ ಅಧಿಕಾರ ಕೊನೆಯಾಗುತ್ತಾ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

Exit mobile version