Site icon PowerTV

ಮೋದಿ ಮನಸು ಮಾಡಿದ್ರೆ ನಾನೇ ಸಿಎಂ : ಯತ್ನಾಳ್​​

ವಿಜಯಪುರ : ಮುಂದಿನ ಸಿಎಂ ನಾನೇ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾನು ಮುಖ್ಯಮಂತ್ರಿ ಆಗ್ತೇನಿ, ಯಾಕೆ ನಾನು ಆಗಬಾರದಾ..?ಸಿಎಂ ಆಗುವ ಅರ್ಹತೆ ನನಗೂ ಇದೆ. ಬಿಜೆಪಿ ಹೈಕಮಾಂಡ್ ಒಪ್ಪಿ ಈ ಬಾರಿ ಚುನಾವಣೆ ನೇತೃತ್ವವನ್ನು ನನಗೆ ಕೊಟ್ಟರೆ 130 ಸೀಟ್ ಗ್ಯಾರಂಟಿ ಎಂದು ಭರವಸೆ ನೀಡಿದರು.

ಇನ್ನು ನನ್ನ ಮೇಲೆ ಯಾವುದೇ ರೀತಿಯ ಗಣಿ, ಅಕ್ರಮ ಆಸ್ತಿ, ಜಾತಿ ಆರೋಪ ಇಲ್ಲ. ಪ್ರಧಾನಿ ಮೋದಿ ಅವರು ಮನಸ್ಸು ಮಾಡಿದ್ರೇ ನಾನೇ ಸಿಎಂ ಆಗುತ್ತೇನೆ. 130 ಸೀಟ್ ತರುವ ತಾಕತ್ತು ನನಗೆ ಇದೆ. ಹೈಕಮಾಂಡ್ ನೇತೃತ್ವ ನೀಡಿದರೆ ನಾನು ಚುನಾವಣೆ ಹೊಣೆ ಹೊರುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​​  ಪ್ರತಿಕ್ರಿಯಿಸಿದರು.

Exit mobile version