Site icon PowerTV

ಮೇಕೆದಾಟು ಪಾದಯಾತ್ರೆ ಅಲ್ಲ, ಶೋಗಾಗಿ ನಡೆಸಿದ ಯಾತ್ರೆ : ಹೆಚ್​​ಡಿಕೆ

ಮೈಸೂರು : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪರ್ಯಾಯವಲ್ಲ, ಅದು ಶೋಗಾಗಿ ನಡೆಸಿದ ಯಾತ್ರೆ ಎಂದು ವಿರೋಧ ಪಕ್ಷ ನಾಯಕರ ವಿರುದ್ದ ಮಾಜಿ ಹೆಚ್​​ ಡಿ ಕುಮಾರಸ್ವಾಮಿ ಕಿಡಿಕಾರಿದರು.

ಇಂದು ಜನತಾ ಜಲಧಾರೆ ಯಾತ್ರೆ ವಿಚಾರ ಹಿನ್ನಲೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪರ್ಯಾಯವಲ್ಲ, ಅದು ಶೋಗಾಗಿ ನಡೆಸಿದ ಯಾತ್ರೆ. ಅವರು ನೇರವಾಗಿ ರಾಜಕೀಯ ಯಾತ್ರೆ ಅಂತಾ ಹೇಳಲಿಲ್ಲ. ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡಲು ಮಾಡುತ್ತಿರುವ ಯಾತ್ರೆ. ಈ ಮೂಲಕ ಮುಂದಿನ ಚುನಾವಣೆಗಾಗಿ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇದನ್ನು ನಾನು ನೇರವಾಗಿ ಹೇಳುತ್ತಿದ್ದೇನೆ ಎಂದರು.

ಇನ್ನು ಕಾಂಗ್ರೆಸ್​ನವರು ಸಿಎಂ ಬಸವರಾಜ ಬೊಮ್ಮಾಯಿ ಮೌನ ಬಸವಣ್ಣ ಎಂಬ ಹೇಳಿಕೆಗೆ ನನ್ನ ಮಾತಲ್ಲ,  ನನ್ನ ಕೆಲಸ ಮುಖ್ಯ ಎಂದಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ ನಿಮ್ಮ ಯಾವ ಕೆಲಸ ಮಾತನಾಡುತ್ತಿದೆ ? ರಾಯಚೂರಿನಲ್ಲಿ ತಲವಾರ್ ಹಂಚಿದ್ದಾರೆ, ಯಾವ ಕಾರಣಕ್ಕೆ ತಲವಾರ್ ಹಂಚಿದ್ದಾರೆ ? ಅವರ‌ನ್ನು ನೀವು ಅರೆಸ್ಟ್ ಮಾಡಿದ್ದೀರಾ ? ಮೌನಿ‌ ಬಸವರಾಜ ಬೊಮ್ಮಾಯಿ ಅವರೇ ಎಂದು ಸಿಎಂಗೆ ಹೆಚ್ ಡಿ ಕೆ ತಿರುಗೇಟು ನೀಡುವ ಮೂಲಕ ಮತ್ತೆ ಬಸವರಾಜ ಬೊಮ್ಮಾಯಿ ಮೌನದ ಬಗ್ಗೆ ಉಲ್ಲೇಖಿಸಿದರು.

Exit mobile version