Site icon PowerTV

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಲ್ವರು ಹೆಸರು ಫೈನಲ್​​..?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಪುಟ ಸರ್ಜರಿಗೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ರಾಜ್ಯ ಬಿಜೆಪಿಗೆ ಹೊಸ ಸಾರಥಿಯ ಆಯ್ಕೆಗೆ ಒಕ್ಕಲಿಗ ಸಮುದಾಯದ ಅಧಾರದ ಮೇಲೆ ನಾಲ್ವರ ಹೆಸರನ್ನ ಶಾರ್ಟ್ ಲಿಸ್ಟ್ ವರಿಷ್ಠರು ಮಾಡಿದ್ದಾರೆ.

ಸಮುದಾಯದ ಅಧಾರದ ಮೇಲೆ ನಾಲ್ವರ ಹೆಸರನ್ನ ಶಾರ್ಟ್ ಲಿಸ್ಟ್ ವರಿಷ್ಠರು ಮಾಡಿದ್ದು, ಒಕ್ಕಲಿಗ ಸಮುದಾಯದಿಂದ ಇಬ್ಬರ ಹೆಸರು ಫೈನಲ್ ಆಗಿದ್ದು ಸಿಟಿ‌ ರವಿ ಮತ್ತು‌ ಅಶ್ವಥ್ ನಾರಾಯಣ್. ಒಬಿಸಿಯಿಂದ ಸುನೀಲ್ ಕುಮಾರ , ದಲಿತ‌ ಸಮುದಾಯದಿಂದ ಅರವಿಂದ್ ಲಿಂಬಾವಳಿ ಹೆಸರುಗಳನ್ನು ಆಯ್ಕೆ ಮಾಡಲಾಗಿದ್ದು, ಸಂಘ ಪರಿವಾರದಿಂದಲೂ ಈ ನಾಲ್ವರ ಹೆಸರು ಪ್ರಸ್ತಾಪಿಸುತ್ತಿದೆ.

ಇನ್ನೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​​ ಕುಮಾರ್​​ ಕಟೀಲು ಅವಧಿ ಮುಕ್ತಾಯಗೊಳ್ಳಲಿದ್ದು, ಹೀಗಾಗಿ ಮೇನಲ್ಲಿಯೇ ಅಧ್ಯಕ್ಷರ ಬದಲಾವಣೆ ಸಾಧ್ಯತೆಯಾಗಲಿದೆ. ಬಹುತೇಕ ಅಶ್ವಥ್ ನಾರಾಯಣ್ ಅಥವಾ ಸಿಟಿ ರವಿಗೆ ಪಟ್ಟಾಭಿಷೇಕ ಸಾಧ್ಯತೆ ಇದೆ.

Exit mobile version