Site icon PowerTV

ಹೆಚ್​.ಡಿ ಕುಮಾರಸ್ವಾಮಿ ತಾಕತ್​ ಕೊಂಡಾಡಿದ ಕೆ.ಎನ್​ ರಾಜಣ್ಣ

ತುಮಕೂರು: ಬಿಜೆಪಿಯನ್ನು ಕಟುವಾಗಿ ಖಂಡಿಸುವ ಧೈರ್ಯ ಕಾಂಗ್ರೆಸಿಗಿಲ್ಲ ಆದರೆ ಆ ಧೈರ್ಯ ಹೆಚ್​​.ಡಿ ಕುಮಾರಸ್ವಾಮಿ ತೋರಿದ್ದಾರೆ ಅವರ ಅಭಿನಂಧಿಸುತ್ತೇನೆ ಎಂದು ಮಧುಗಿರಿ ಕ್ಷೇತ್ರದ ಮಾಜಿ ಕಾಂಗ್ರೆಸ್​​ ಶಾಸಕ ಕೆ.ಎನ್​ ರಾಜಣ್ಣ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿರುವ ಖಾಸಗಿ ಹೋಟೆಲ್​ನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ. ಆಜಾನ್ ಕೂಗೋದು ನಿನ್ನೆ ಮೊನ್ನೆಯದಲ್ಲ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು.

ಇನ್ನು ನಾವೆಲ್ಲ ಭಾಷಣ ಮಾಡುವಾಗ ಆಜಾನ್ ಕೇಳಿದ್ರೆ ಮಧ್ಯ ಭಾಷಣ ನಿಲ್ಲಿಸಿ ಗೌರವಿಸುತ್ತೇವೆ. ಇಂತಹ ಸಮಯದಲ್ಲಿ ಬಿಜೆಪಿ ವಿವಾದ‌ ಸೃಷ್ಟಿಸಿದೆ. ಬಿಜೆಪಿ ಧೋರಣೆ ಖಂಡಿಸಲು ಕಾಂಗ್ರೆಸ್​ಗೆ ಧೈರ್ಯ ಇಲ್ಲ. ಹೆಚ್​.ಡಿ ಕುಮಾರಸ್ವಾಮಿ ಮಾತ್ರ ಮುಲಾಜಿಲ್ಲದೆ ಖಂಡಿಸ್ತಾರೆ. ಈ‌ ವಿಚಾರಕ್ಕೆ ಕುಮಾರಸ್ವಾಮಿಯನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ಡಿಕೆ ಪರ ಬ್ಯಾಟಿಂಗ್​ ಮಾಡಿದ್ದಾರೆ.

ಸದ್ಯ ಯಾರೋ ಪೋಲಿಗಳು ಭಿತ್ತಿಪತ್ರ ಹಂಚಿ ಬಿಡುತ್ತಾರೆ ಅದಕ್ಕೆಲ್ಲಾ ಬೆಲೆ ಕೊಡೊಕಾಗುತ್ತಾ ಎಂದು ಕುಮಾರಸ್ವಾಮಿ ತಾಕತ್ತಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದಗಳು. ನಾವು ಕಾಂಗ್ರೆಸ್​ನವರು, ನಮಗೆ ದಬ್ಬಣ ಚುಚ್ಚಬೇಕು. ಕೆಲವರು ಸೂಜಿ ಚುಚ್ಚಿದರೂ ಎಚ್ಚರವಾಗ್ತಾರೆ. ಆದರೆ, ನಾವು ಕಾಂಗ್ರೆಸ್​ನವರಿಗೆ ದಬ್ಬಳ ಚುಚ್ವಬೇಕು. ಹಾಗಾಗಿ ನಾವು ಪಕ್ಷದ ಪ್ರಚಾರದಲ್ಲಿ ಹಿಂದೆ ಉಳಿದಿದ್ದೇವೆ ಎಂದು ಕೆ.ಎನ್​ ರಾಜಣ್ಣ ಅವರು ಮಾತನಾಡಿದ್ದಾರೆ.

Exit mobile version