Site icon PowerTV

ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ಸಾಲಮನ್ನಾ : ಹೆಚ್​​ಡಿಕೆ

ಬೆಂಗಳೂರು : ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಘೋಷಣೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.

JDS ವತಿಯಿಂದ ನಡೆದ ರೈತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಸಾಲಮನ್ನಾ ಮಾಡುತ್ತೇವೆ ಎಂಬ ಭರವಸೆಯನ್ನು ರೈತ ಸಮೂಹಕ್ಕೆ ಕೊಟ್ಟಿದ್ದಾರೆ.

ಇನ್ನು, ಅಂತಹ ಸಂದರ್ಭ ಬಂದ್ರೆ ದಲಿತ ಸಿಎಂ ಮಾಡಲು ಕೂಡ ಸಿದ್ಧ ಅಂತ ಸಂದೇಶ ರವಾನಿಸಿದ್ದಾರೆ.. ಹೌದು, ಇಂದು ಜೆಡಿಎಸ್‌ ವತಿಯಿಂದ ರೈತ ಸಂವಾದ ನಡೆಸಿ, ರೈತ ಸಂಘಟನೆಗಳಿಗೆ 10 ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಿ ಮಾಡ್ತೀವಿ ಎಂದಿದ್ದಾರೆ. ಇನ್ನು, ಇದೇ ವೇಳೆ ಮಾತನಾಡಿರುವ ಹೆಚ್‌ಡಿಕೆ ದಲಿತ ಸಿಎಂ ಮಾಡಲು ಕೂಡ ಸಿದ್ದ ಅಂತ ಸಂದೇಶ ರವಾನಿಸಿದ್ದಾರೆ.

Exit mobile version