Site icon PowerTV

ಗೃಹ ಸಚಿವರ ಪರ ಅಶ್ವತ್​​ ನಾರಾಯಣ್​​ ಬ್ಯಾಟಿಂಗ್​​

ಬೆಂಗಳೂರು : ಕಾನೂನನ್ನು ಗೌರವಿಸಬೇಕು, ಪ್ರಜಾಪ್ರಭುತ್ವಕ್ಕಿಂತ ದೊಡ್ಡದು ಯಾವುದೂ ಇಲ್ಲ. ಎಲ್ಲರೂ ಕಾನೂನು ಪಾಲನೆ ಮಾಡಬೇಕಾಗಿದೆ ಆದರೆ ಅದರಲ್ಲಿ ಭಾವನಾತ್ಮಕ ಮನಸ್ಥಿತಿ ಬೇಡ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಶ್ವಥ್ ನಾರಾಯಣ್  ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು ಯಾವುದೇ ರೀತಿ ಭಯೋತ್ಪಾದನಾ ಸಂಘಟನೆಗೆ ಜನರು ಭಾಗವಹಿಸುವಂತಿಲ್ಲ, ಇದೊಂದು ಖಂಡನೀಯ ವಿಚಾರವಾಗಿದೆ. ಕಾನೂನು ಪಾಲನೆ ಮಾಡ್ತಾ ಇದ್ದೀವಿ, ಹೊಸ ಕಾನೂನು ನಾವು ತಂದಿಲ್ಲ. ಸರ್ಕಾರವು ಕಾನೂನು ಪಾಲನೆ ಮಾಡುತ್ತಿದೆ ಎಂದರು.

ಇನ್ನು ಇಂಥ ಸಂಘಟನೆಗಳು ಆಗಾಗ ಮೂಗುತೂರಿಸಿವ ಕೆಲಸ ಮಾಡಿದ್ದಾರೆ. ಈ ರೀತಿಯ ಬೆಳವಣಿಗೆ ಆರೋಗ್ಯಕರವಲ್ಲ ನಮ್ಮ ನಾಗರೀಕರು ಇಂಥದಕ್ಕೆ ಸ್ಪಂದಿಸಬಾರದು. ಕಾನೂನನ್ನು ಗೌರವಿಸಬೇಕು, ಪ್ರಜಾಪ್ರಭುತ್ವಕ್ಕಿಂತ ದೊಡ್ಡದು ಯಾವುದೂ ಇಲ್ಲ. ನಮಗೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಸ್ಪಷ್ಟತೆ ಇಲ್ಲದೇ ಇದ್ದರೆ ಇಂಥಹ ಗೊಂದಲ ಆಗುತ್ತದೆ ಎಂದರು.

ಅದುವಲ್ಲದೇ ಹಿಜಾಬ್​​ ಸ್ಕೂಲ್ ಯುನಿಫಾರ್ಮ್ ತಂದಿದ್ದೇವೆ ಅದನ್ನು ಧರಿಸಬೇಕು. ಯಾವ ಯಾವ ಪಕ್ಷಗಳಿಗೆ ಸ್ಪಷ್ಟತೆ ಇಲ್ವೋ ಅದು ಅವರಿಗೆ ಗೊಂದಲ ಆಗುತ್ತಿದೆ ಅಷ್ಟೇ.

ಚಂದ್ರು ಹತ್ಯೆ ವಿಚಾರವಾಗಿ ಗೃಹ ಸಚಿವರ ಹೇಳಿಕೆ ವಿಚಾರ ಹಿನ್ನಲೆ ಚಂದ್ರು ಕೊಲೆ ಪ್ರಕರಣ ಘಟನೆಗೆ  ನಡೆದಿರುವ ಆಧಾರಿತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಧರ್ಮ, ಭಾಷೆ ಆಧಾರಿತವಾಗಿ ಇಂತಹ ಘಟನೆ ನಡೆಯಬಾರದು. ನಡೆದ ಘಟನೆ ಬಗ್ಗೆ ಯಾವ ಹಿನ್ನೆಲೆಯಲ್ಲಿ ನಡೆದಿದೆ ಅಂತ ಹೇಳಿದ್ದಾರೆ. ವಿಷಾದ ವ್ಯಕ್ತಪಡಿಸಿರೋದು ಅವರ ದೊಡ್ಡತನ. ತನಿಖೆಯಿಂದ ಈ ಘಟನೆಯ ಸ್ಪಷ್ಟತೆ ಹೊರ ಬರಲಿದೆ ಮತ್ತು ರಾಜಕೀಯ ಪಕ್ಷಗಳು ಬೇಳೆ ಬೇಯಿಸುವ ಕೆಲಸ ಆಗುತ್ತಾ ಇದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

Exit mobile version