Site icon PowerTV

ತಪ್ಪು ಮಾಡಿದವರ ಬೆಂಬಲಕ್ಕೆ ನಿಲ್ಲಬಾರದು : ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ: ಹಿಂದೂ ದೇವಾಲಯಗಳಲ್ಲಿ ಮತ್ತು ಹಿಂದೂ ದೇವಸ್ಥಾನಗಳ ಜಾತ್ರಾ ಮಹೋತ್ಸವಗಳಲ್ಲಿ ಮುಸಲ್ಮಾನ ಸಮುದಾಯದ  ವ್ಯಾಪಾರಿಗಳನ್ನು ನಿಷೇಧಿಸುವ ಕೆಲಸ ಜಾರಿಯಲ್ಲಿರುವ ಹಾಗೆಯೇ ಉಡುಪಿಯಲ್ಲಿ ಈ ಸಮುದಾಯದ ಮುಖಂಡರು ಬುಧವಾರದಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  ಅವರನ್ನು ಭೇಟಿ ಮಾಡಿದರು.

ನಂತರ ಅವರೊಂದಿಗೆ ಮಾತುಕತೆ ನಡೆಸಿ ಅವರ ದೂರು ದುಮ್ಮಾನಗಳನ್ನು ಆಲಿಸಿದ ಬಳಿಕ ಸ್ವಾಮೀಜಿಗಳು ಮಾಧ್ಯಮದವರೊಂದಿಗೆ ಮಾತಾಡಿದರು. ಪೇಜಾವರ ಶ್ರೀಗಳು ಮುಸ್ಲಿಂ ಸಮುದಾಯ ಪ್ರತಿನಿಧಿಸುವ ಜನರ ಮನೋಭಾವ ಮತ್ತು ಧೋರಣೆಗಳ ಬಗ್ಗೆ ಮಾತಾಡಿದರು. ಸಮುದಾಯದ ಜನರೆಲ್ಲ ಒಂದೇ ರೀತಿ ಅಂತ ಹೇಳಲಾಗದು ತಪ್ಪು ಮತ್ತು ಅಪರಾಧ ಎಸಗುವ ಕೆಲ ಜನರ ಕೃತ್ಯಗಳು ಖಂಡಿಸದೆ ಅವರ ಪರವಾಗಿ ನಿಂತುಕೊಳ್ಳುವುದು, ಅವರ ಪರ ವಾದ ಮಾಡುವುದು ತಪ್ಪು ಮತ್ತು ಈ ತಪ್ಪು ಮಾಡುವುದನ್ನು ಅವರು ನಿಲ್ಲಿಸಬೇಕು ಎಂದು ಶ್ರೀಗಳು ಹೇಳಿದರು.

Exit mobile version