Site icon PowerTV

ಡಿಕೆಶಿಗೆ ಸಿದ್ದರಾಮಯ್ಯ ವಿಲನ್ : ಬಿಜೆಪಿ

ಬೆಂಗಳೂರು : ಹಿಜಾಬ್ ವಿವಾದ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಬಿಜೆಪಿ ತಿರುಗೇಟು ನೀಡಿದ್ದಾರೆ.

ಅಸಹಾಯಕ ಡಿಕೆಶಿ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ‘ಸದಸ್ಯತ್ವ ಅಭಿಯಾನದಲ್ಲಿ ನಿರೀಕ್ಷಿತ ಗುರಿ ತಲುಪಲಾರದೆ ಸೋತು ಸುಣ್ಣವಾಗಿರುವ ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್​​ಗೆ ಈಗ ಸಿದ್ದರಾಮಯ್ಯ ವಿಲನ್ ಆಗಿದ್ದಾರೆ.

ಹಿಂದುತ್ವದ ವಿರುದ್ಧ ಮಾತನಾಡಿ ಡಿಕೆಶಿ ನಾಯಕತ್ವವನ್ನು ಮುಗಿಸುವುದು ಸಿದ್ದರಾಮಯ್ಯ ಮೊದಲ ಗುರಿ. ಇದನ್ನು ನೋಡಿಯೂ ಅಸಹಾಯಕ ಡಿಕೆಶಿ ಎಂಬಂತಾಗಿದ್ದಾರೆ’ ಅಂತಾ ಕುಟುಕಿದೆ. ಹಿಜಾಬ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳಿದಾಗಲೂ ಸಿದ್ದರಾಮಯ್ಯ ಮಾತೇ ಕೇಳಲಿಲ್ಲ. ಇದರರ್ಥ ಡಿಕೆಶಿ ಅಸಹಾಯಕರೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

Exit mobile version