Site icon PowerTV

ದಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕಿಲ್ಲ ಜನ: ಒಬ್ಬನೇ ಕೂತು ಸಿನಿಮಾ ವೀಕ್ಷಿಸಿದ ಚಿತ್ರಪ್ರೇಮಿ

ಮಂಡ್ಯ: ದಿ ಕಾಶ್ಮೀರ್​ ಫೈಲ್ಸ್​​ ಸಿನಿಮಾ ಇಡೀ ಭಾರತದಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಸೌಂಡ್​ ಮಾಡುತ್ತಿದೆ ಕಾರಣ ಸಿನಿಮಾ ರಾಜಕೀಯ ರೂಪ ಪಡೆದುಕೊಂಡಿವುದು ಜೊತೆಗೆ ಚಿತ್ರ ಕೂಡ ಎಲ್ಲ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ, ಕೋಕಿಲಾ ಚಿತ್ರಮಂದಿರದಲ್ಲಿ ಜನರೇ ಇಲ್ಲ ಕೇವಲ ಒಬ್ಬನೇ ಒಬ್ಬ ಸಿನಿಮಾ ವೀಕ್ಷಣೆ ಮಾಡುತ್ತಿರುವುದು ಸಖತ್​ ವೈರಲ್​ ಆಗುತ್ತಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕೋಕಿಲಾ ‘ದಿ ಕಾಶ್ಮೀರ ಫೈಲ್ಸ್​’ ಸಿನಿಮಾವನ್ನು ಚಿತ್ರಪ್ರೇಮಿಯೊಬ್ಬನು ವೀಕ್ಷಣೆ ಮಾಡಿದ್ದಾನೆ. ಹತ್ತು ಟಿಕೆಟ್​​ ಹಣ ಖರೀದಿಸಿ ಒಬ್ಬರೇ ಚಿತ್ರ ವೀಕ್ಷಿಸಿದ ಅಪರೂಪದ ಪ್ರಸಂಗ ನಡೆದಿದೆ.

ಕಾಶ್ಮೀರ್​ದ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ದಿ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ವೀಕ್ಷಿಸಲು ಪಾಂಡವಪುರ ಟೌನ್ ಹಾರೋಹಳ್ಳಿ ಗ್ರಾಮದ ನಿವಾಸಿ ಡೈಮೆಂಡ್ ರವಿ ಎಂಬುವರು ಪಾಂಡವಪುರ ಕೋಕಿಲಾ ಚಿತ್ರಮಂದಿರಕ್ಕೆ ತೆರಳಿದಾಗ, ಅಲ್ಲಿ ಚಿತ್ರ ವೀಕ್ಷಿಸಲು ಯಾರೂ ಬಂದಿಲ್ಲ, ನೀವೊಬ್ಬರೇ ಬಂದಿರೋದು ಎಂದು ಹೇಳಿದಾಗ, ಚಲನಚಿತ್ರ ಪ್ರದರ್ಶನ ಇಲ್ಲ ಎಂದಿದ್ದಾರೆ.

ನಾನು ಈ ಚಿತ್ರ ನೋಡಲೇಬೇಕು. ಹತ್ತು ಟಿಕೆಟ್​ ನಾನೊಬ್ಬನೇ ಖರೀದಿಸುತ್ತೇನೆಂದು ಹೇಳಿ ಟಿಕೆಟ್​ ಅನ್ನು ಒಬ್ಬನೇ ಖರೀದಿಸಿ ಮಾಡಿದ್ದೇನೆ. ಬಳಿಕ ಚಿತ್ರಮಂದಿರದ ಒಳಗೆ ಒಬ್ಬನೇ ಕುಳಿತು ಚಿತ್ರ ವೀಕ್ಷಿಸಿರುವ ಸುದ್ದಿ ಸಖತ್​ ವೈರಲ್​ ಆಗಿದೆ.

Exit mobile version