Site icon PowerTV

ನಾವು RSS​ ಎಂದು ನೀವು ಹೇಗೆ ಹೇಳ್ತೀರಾ : ಸ್ಪೀಕರ್​​ ಕಾಗೇರಿ

ಬೆಂಗಳೂರು : ಮುಂದೊಂದು ದಿನ ಎಲ್ಲರೂ ನಮ್ಮ ಆರ್​ಎಸ್​ಎಸ್​ ಎಂದು ಹೇಳುವ ಕಾಲ ಬರಲಿದೆ’ ಎಂದು ಸ್ಪೀಕರ್​​ ಕಾಗೇರಿ ಹೇಳಿದ್ದಾರೆ.

ಕರ್ನಾಟಕದ ಕಾನೂನು ಸುವ್ಯವಸ್ಥೆ ವಿಚಾರವಾಗಿ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಸುದೀರ್ಘ ಭಾಷಣ ಮಾಡಿದರು. ಭಾಷಣದ ಮಧ್ಯೆ ವೈಯಕ್ತಿಕ ಸಂಬಂಧಗಳ ಬಗ್ಗೆ ಪ್ರಸ್ತಾಪಿಸಿದರ ಅವರು, ‘ಕಂದಾಯ ಸಚಿವ ಅರ್.ಅಶೋಕ್ ಜೊತೆಗೆ ನನ್ನ ಸಂಬಂಧ ಚೆನ್ನಾಗಿದೆ. ಮೊದಲಿಗೆ ನಾವು ಮನುಷ್ಯರು ನಂತರ ಉಳಿದದ್ದು ಎಂದರು.

ಆರ್​ಎಸ್​ಎಸ್​ ಇನ್ನೊಂದು ಮತ್ತೊಂದು’ ಎಂದು ಹೇಳಿದರು. ಈ ಮಾತಿಗೆ ನಗಾಡುತ್ತಾ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಇದೇನ್ರೀ ನೀವು, ನಮ್ಮ ಆರ್​ಎಸ್​ಎಸ್​ ಬಗ್ಗೆ ಹೀಗೆಲ್ಲಾ ಹೇಳಬಹುದೇ’ ಎಂದು ಪ್ರಶ್ನಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಸಹ ದನಿಗೂಡಿಸಿ, ‘ಮುಂದೊಂದು ದಿನ ಎಲ್ಲರೂ ನಮ್ಮ ಆರ್​ಎಸ್​ಎಸ್​ ಎಂದು ಹೇಳುವ ಕಾಲ ಬರಲಿದೆ’ ಎಂದರು. ನಮ್ಮ ಆರ್​ಎಸ್​ಎಸ್ ಎಂದು ಹೇಗೆ ಹೇಳ್ತೀರಾ ಎಂದು ಸ್ಪೀಕರ್​ ಮೇಲೆ ಕಾಂಗ್ರೆಸ್​ ನಾಯಕರು ಮುಗಿಬಿದ್ದರು. ಹಗುರವಾಗಿ, ತಮಾಷೆಯಾಗಿ ಆರಂಭವಾದ ಮಾತು ಇದ್ದಕ್ಕಿದ್ದಂತೆ ಬಿರುಸಾಯಿತು.

Exit mobile version