Site icon PowerTV

ಬಿಜೆಪಿಗೆ ಸಾಧನೆ ಮಾಡೀವಿ ಅಂತಾ ಹೇಳೋಕೆ ಏನೂ ಇಲ್ಲ-ಶಿವರಾಜ್ ತಂಗಡಗಿ

ಕೊಪ್ಪಳ: ಬಿಜೆಪಿಯವರಿಗೆ ಜಗಳ, ಸಂಘರ್ಷ ಇರಬೇಕು ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಅವರಿಗೆ ಹೇಳಿಕೊಳ್ಳೋಕೆ ಏನೂ ಕೆಲಸ ಇಲ್ಲ, ಚುನಾವಣೆ ಬಂದ ಮೇಲೆ ಹೇಳಿಕೊಳ್ಳೋ ಕೆಲಸ ಇಲ್ಲ. ಆದರೆ ನಾವು ಹಾಗಲ್ಲ, ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತೀವಿ ಎಂದು ಅವರು ಹೇಳಿದ್ದಾರೆ.

“ಅವರಿಗೆ ವೋಟ್ ಕೇಳೋಕೆ ಮುಖ ಇಲ್ಲ, ಸಾಧನೆ ಮಾಡೀವಿ ಅಂತಾ ಹೇಳೋಕೆ ಏನೂ ಇಲ್ಲ ಬಿಜೆಪಿಗರಿಗೆ. ಹಿಂದೂ ಮುಸ್ಲಿಂ ಡಿವೈಡ್ ಮಾಡಿ ವೋಟ್ ತಗೋಳೋದು ಅವರ ಕೆಲಸವಾಗಿದೆ. ನಾವೆಲ್ಲ ಹುಟ್ಟಿ 50 ವರ್ಷ ಆಯ್ತು.ಇವತ್ತು ಯಾಕೆ ಇದು ಬಂತು? ಬಿಜೆಪಿ ಹೇಳಿರೋ ಯಾವುದೇ ಕೆಲಸ ಮಾಡಿಲ್ಲ, ಬಿಜೆಪಿಯವರಿಗೆ ಈ ದೇಶ ಆಳೋಕೆ ಯೋಗ್ಯತೆ ಇಲ್ಲ. 2023 ರಲ್ಲಿ ಚುನಾವಣೆ ಆಗುತ್ತೆ, ಜನ ಮುಟ್ಟಿ ನೋಡಿಕೊಳ್ಳೋ ಹಾಗೆ ಮಾಡ್ತಾರೆ” ಎಂದು ತಂಗಡಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು.

Exit mobile version