Site icon PowerTV

ಎಲ್ಲರೂ ನನಗೆ ಪೋನ್​ ಮಾಡಿ ಹೇಳುತ್ತಿದ್ದಾರೆ – ಡಿ.ಕೆ ಶಿವಕುಮಾರ್

ಕಲಬುರಗಿ: ಅನೇಕ ಚಿತ್ರಮಂದಿರ ಮಾಲೀಕರು ನನಗೆ ಪೋನ್ ಮಾಡಿ ಹೇಳಿದ್ದಾರೆ. ಜೇಮ್ಸ್ ಚಿತ್ರ ತೆಗೆದು ಕಾಶ್ಮೀರಿ ಫೈಲ್ಸ್ ಹಾಕುವಂತೆ ಬಿಜೆಪಿ ಶಾಸಕರು ಮಂತ್ರಿಗಳು ಪೋನ್ ಮಾಡಿ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

ನಗರದಲ್ಲಿಂದು ಕಾಶ್ಮೀರಿ ಫೈಲ್ಸ್​​​ಗಾಗಿ ಜೇಮ್ಸ್ ಚಿತ್ರಕ್ಕೆ ಚಿತ್ರಮಂದಿರ ಸಿಗದ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪುನಿತ್ ರಾಜಕುಮಾರ ಕೊನೆಯ ಚಿತ್ರಕ್ಕೆ ತೊಂದರೆ ಕೊಡುವುದು ಸರಿಯಲ್ಲ, ಅವರು ದೇಶಕಂಡ ಮಹಾನ್​ ಕಲಾವಿದ ಎಂದರು.

ಇನ್ನು ದಿ ಕಾಶ್ಮೀರ್​ ಫೈಲ್ಸ್ ಚಿತ್ರಕ್ಕೆ ತೆರಿಗೆ ರಿಯಾಯತಿ ಕೊಡುವದಕ್ಕೇನಿದೆ(?) ಗಾಂಧಿ ಹತ್ಯಗಿಂತ ದೊಡ್ಡ ಚಿತ್ರಬೇಕಾ(?) ಈ ಚಿತ್ರದ ಮೂಲಕ ಕಾಂಗ್ರೆಸ್​ನವರು ಕೆಟ್ಟವರು ಅಂತ ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಸರಿಯಲ್ಲ, ಎಲ್ಲಾ ಕಡೆ ಎಲ್ಲರಿಗೂ ವ್ಯಾಪರಕ್ಕೆ ಅವಕಾಶ ನೀಡಬೇಕು ಹಾಗಾದ್ರೆ ಚರ್ಚ್, ಮಸೀದಿ ಮುಂದೆ ಹಿಂದುಗಳಿಗೆ ಅವಕಾಶ ನೀಡದೇ ಹೋದ್ರೆ ಏನಾಗುತ್ತೆ. ಅನೇಕರು ಅನೇಕ ರೀತಿಯ ಕೆಲಸ ಮಾಡುತ್ತಿದ್ದಾರೆ ಅದಕ್ಕೆ ಯಾರು ತೊಂದರೆ ಕೊಡುವ ಕೆಲಸವನ್ನು ಮಾಡಬಾರದು ಎಂದು ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Exit mobile version