Site icon PowerTV

ಮುಸ್ಲಿಂ ವ್ಯಾಪಾರಸ್ಥರಿಗೆ ನೋ ಎಂಟ್ರಿ ವಿಚಾರಕ್ಕೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಬೆಂಗಳೂರು: ನಾನು ಟಿವಿಯಲ್ಲಿ ನೋಡಿದ್ದೇನೆ. ಪೊಲೀಸ್ ವರದಿ ಕೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದರು.

ಮುಸ್ಲಿಂ ವ್ಯಾಪಾರಸ್ಥರಿಗೆ ಜಾತ್ರೆಗಳಲ್ಲಿ ಅವಕಾಶ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಮನಸ್ಸುಗಳು ಒಡಯಬಾರದು. ಇದು ದುರಾದೃಷ್ಟಕರ, ಎಲ್ಲಾರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ಶಾಂತಿ-ಸುವ್ಯವಸ್ಥೆ ಕದಡದಂತೆ ನೋಡಿಕೊಳ್ಳುತ್ತೇವೆ ಎಂದರು.

ಅದುವಲ್ಲದೇ, ಹಿಜಾಬ್ ತೀರ್ಪು ವಿರೋಧಿಸಿ ಒಂದು ಕೋಮಿನವರು ಅಂಗಡಿ ಬಂದ್ ಮಾಡಿದರು. ಆ್ಯಕ್ಷನ್​ಗೆ ರಿಯಾಕ್ಷನ್ ಎನ್ನುವಂತೆ ಆಗಿದೆ. ನಾನು ವರದಿ ಪಡೆಯುತ್ತೇ‌ನೆ ಎಂದು ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಇದೇ ವೇಳೆ ಜೇಮ್ಸ್ ಚಿತ್ರಕ್ಕೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿರೋ ಆರೋಪದ ಬಗ್ಗೆ ಮಾತನಾಡಿದ ಅವರು, ಜೇಮ್ಸ್ ಚಿತ್ರವೇ ಬೇರೆ, ದಿ ಕಾಶ್ಮೀರ ಫೈಲ್ಸ್ ಚಿತ್ರವೇ ಬೇರೆ. ಜೇಮ್ಸ್ ಚಿತ್ರಕ್ಕೆ ಯಾರೂ ವಿರೋಧ ಮಾಡುತ್ತಿಲ್ಲ, ಜನರ ಮನಸ್ಸನ್ನು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಸಚಿವರು ಜಾರಿಗೊಂಡರು.

Exit mobile version