Site icon PowerTV

ಉದ್ಯಮಿ ಕೊಲೆಗೆ ಪಾರ್ಟನರ್, ಪತ್ನಿಯಿಂದಲೇ ಸುಪಾರಿ

ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ಸಿಕ್ಕಿದ್ದು ಕೊಲೆಗೆ ಉದ್ಯಮಿ ಪಾರ್ಟನರ್ ಪತ್ನಿಯಿಂದಲೇ ಸುಪಾರಿ ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಮಾರ್ಚ್ 15 ರಂದು ಮಂಡೋಳಿ ರಸ್ತೆಯಲ್ಲಿ ಉದ್ಯಮಿ ರಾಜು ದೊಡ್ಡಬೊಮ್ಮನವರ್(41) ಕೊಲೆ ನಡೆದಿತ್ತು. ಇನ್ನು ಈ ಪ್ರಕರಣ ಸಂಬಂಧ ಮೂರು ಜನ ಆರೋಪಿಗಳಾದ ಶಶಿಕಾಂತ್ ಶಂಕರಗೌಡ, ಧರ್ಮೇಂದ್ರ ಘಂಟಿ ಹಾಗೂ ಪತ್ನಿ ಕಿರಣ್ ದೊಡ್ಡಬೊಮ್ಮನವರ್(26) ಬಂಧಿಸಲಾಗಿತ್ತು.

ಸದ್ಯ ಪ್ರಕರಣದ ವಿಚಾರದ ವೇಳೆ ಸತ್ಯ ಹೊರ ಬಂದಿದ್ದು, ಮೊದಲ ಮದುವೆಯನ್ನು ಮುಚ್ಚಿಟ್ಟು ಕಿರಣ್ ಜತೆಗೆ ‌‌ ಉದ್ಯಮಿ ರಾಜು ವಿವಾಹ ಆಗಿದ್ದರು. ಲಾಭದಲ್ಲಿ ಪಾಲುದಾರರಿಗೆ ರಾಜು ಹಣ ನೀಡಿರಲಿಲ್ಲ ಹೀಗಾಗಿ ರಾಜು ಹಾಗೂ ಪಾಲುದಾರರ ನಡುವೆ ವೈಮನಸ್ಸು ಉಂಟಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಇನ್ನು ಕೊಲೆ ಆರೋಪಿಗಳ ಪತ್ತೆಗಾಗಿ ಬೆಳಗಾವಿ ಗ್ರಾಮೀಣ ಪೊಲೀಸರು ಬಲೆ ಬೀಸಿದ್ದಾರೆ.

Exit mobile version