Site icon PowerTV

ಜಮೀರ್‌ ಅಹಮದ್‌ ಹಾಗೂ ತನ್ವೀರ್‌ ಸೇಠ್ ಬೆನ್ನು ಬಿದ್ದ ಸಿ.ಎಂ. ಇಬ್ರಾಹಿಂ

ಬೆಂಗಳೂರು : ಕಾಂಗ್ರೆಸ್‌ಗೆ ಕೈ ಕೊಟ್ಟು ಜೆಡಿಎಸ್‌ ತೆನೆ ಹೊರಲು ಸಜ್ಜಾಗಿರುವ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ, ಮತ್ತಷ್ಟು ನಾಯಕರನ್ನು ಸೆಳೆಯಲು ಮುಂದಾಗಿದ್ದು ನನ್ನೊಂದಿಗೆ ನೀವೂ ಬನ್ನಿ ಎಂದು ಮಾಜಿ ಸಚಿವರಾದ ಜಮೀರ್‌ ಅಹಮದ್‌ ಹಾಗೂ ತನ್ವೀರ್‌ ಸೇಠ್ ಬೆನ್ನು ಬಿದ್ದಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಫ‌ಲಿತಾಂಶ ನೋಡಿದರೆ ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತ್ರಿಶಂಕು ಪರಿಸ್ಥಿತಿ ಏರ್ಪಡುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಜೆಡಿಎಸ್‌ ಜತೆಗಿದ್ದರೆ ಸರ್ಕಾರ ರಚಿಸುವ ಅಥವಾ ಪಾಲುದಾರರಾಗುವ ಅವಕಾಶ ಸಿಗಬಹುದು ಎಂದು ಆಸೆ ತೋರಿಸುತ್ತಿದ್ದಾರೆ.

ಮುಂದಿನ ಸರ್ಕಾರಕ್ಕೆ ಜೆಡಿಎಸ್‌ ಬೆಂಬಲ ಅನಿವಾರ್ಯ ಎಂದಾದರೆ ಉಪಮುಖ್ಯಮಂತ್ರಿ ಸೇರಿ ಪ್ರಮುಖ ಸಚಿವಗಿರಿ ಸಿಗಲಿದೆ. ಆಗ, ನಿಮಗೆಲ್ಲಾ ಅಧಿಕಾರ ಕೊಡಿಸುವ ಹೊಣೆಗಾರಿಕೆ ನನ್ನದು ಎಂಬ ಆಶ್ವಾಸನೆ ಸಹ ನೀಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Exit mobile version