Site icon PowerTV

ಮೋಹನ್ ಮನೆಯ ಮೇಲೆ ಎಸಿಬಿ ದಾಳಿ

ಬೆಂಗಳೂರು: ಆಟೋ ಚಾಲಕನಾಗಿದ್ದ ಮೋಹನ್​ ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದು. ಬಿಡಿಎ ಬ್ರೋಕರ್ ಏಜೆಂಟ್ ಮೋಹನ್ ಮನೆಯ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ.

ಬಿಡಿಎನಲ್ಲಿ ಇವರು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸುವುದು, ಬಿಡಿಎ ಅಗತ್ಯ ಅನುಮತಿ ಪತ್ರ ಕೊಡಿಸೋದು, ಮನೆ ಕಟ್ಟಲು ಬಿಲ್ಡಿಂಗ್ ಲೈಸೆನ್ಸ್ ಅನುಮತಿ ಪತ್ರ ಕೊಡುವುದು, ಸೈಟ್​​ಗಳಿಗೆ ಖಾತೆ ಮಾಡಿಸಿಕೊಡೋದು ಸೇರಿದಂತೆ ಹಲವು ಕೆಲಸಗಳಿಗೆ ಏಜೆಂಟ್ ಆಗಿ ಕೆಲಸ ಮಾಡ್ತಿದ್ರು. ಬಿಡಿಎನಲ್ಲಿ ಯಾವ ಫೈಲ್ ಬೇಕಾದ್ರೂ ಮಾಡಿಸುತ್ತಿದ್ದ ಮುನಿರತ್ನ ಹಿಡಿದ ಕೆಲಸ ಸಾಧಿಸದೇ ಬಿಡುತ್ತಿರಲಿಲ್ಲ.

ಬಿಡಿಎ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ಇವರು ಕೆಲವೇ ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಇನ್ನು, ಸುಮಾರು 5 ಕೋಟಿ ಮೌಲ್ಯದ ಐಷಾರಾಮಿ ಬಂಗಲಿಯಲ್ಲಿ ಐಷಾರಾಮಿ ಬೆಡ್ ರೂಮ್, ಒಂದೊಂದು ಬೆಡ್ ರೂಮ್ ಒಂದೊಂದು ಡಿಸೈನ್, ಗೆಸ್ಟ್ ಜೊತೆ ಪಾರ್ಟಿ ಮಾಡಲು ಪಾರ್ಟಿ ಹಾಲ್ ಎಂಬಂತೆ ಸುಖ ಬೋಗದಲ್ಲಿದ್ರು. ಇವರ ಮೇಲೆ ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಎಸಿಬಿ ರೇಡ್ ಮಾಡಿ ಹಲವು ಬಾರಿ ಎಫ್ ಐ ಆರ್ ಗಳಾಗಿದ್ರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದೇ ಒಂದು ಅಕ್ರಮ ಆಸ್ತಿಯಾಗಲಿ, ಇಲ್ಲ ಹಣವಾಗಲೀ ಜಪ್ತಿ ಮಾಡಿರಲಿಲ್ಲ.

Exit mobile version