Site icon PowerTV

R. ಧ್ರುವನಾರಾಯಣ ಮೇಕೆ ಮೇಯಿಸಲು ಲಾಯಕ್: V. ಶ್ರೀನಿವಾಸ್​ ಪ್ರಸಾದ್

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮೇಕೆ ಮೇಯಿಸಲು ಮಾತ್ರ ಲಾಯಕ್. ಅವರನ್ನು ಸಂಸದರನ್ನಾಗಿ ಮಾಡಿ ತಪ್ಪು ಮಾಡಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಟಿ ನರಸೀಪುರದಲ್ಲಿ ಮಾತನಾಡಿದ ಅವರು, ಮೇಕೆದಾಟಿಗೆ ಆಗಮಿಸುವ ಕಾರ್ಯಕರ್ತರಿಗೆ ಪಲಾವ್ ಮಾಡಿಕೊಡುವ ಜವಾಬ್ದಾರಿಯನ್ನ ಡಿಕೆ ಶಿವಕುಮಾರ್ ಧ್ರುವನಾರಾಯಣ್‌ಗೆ ಕೊಟ್ಟಿದ್ದರು. ಧ್ರುವನಾರಾಯಣ್ ಎಂತಹ ಮುಟ್ಟಾಳ ಅಂದ್ರೆ ಎಲ್ಲರ ಮೇಲು ಬಂದು ಚಾಡಿ ಹೇಳುತ್ತಾನೆ ಎಂದು ವಾಗ್ದಾಳಿ ನಡೆಸಿದರು.

“ನಾಯಕರ ಮಧ್ಯೆಯೇ ಬಿರುಕು ಸೃಷ್ಟಿಸುತ್ತಾನೆ. ಕೇವಲ ಸುಳ್ಳು ಹೇಳಿಕೊಂಡು ಸುತ್ತೋದೆ ಧ್ರುವನಾರಾಯಣ್ ಕೆಲಸ. ಹೀಗಾಗಿಯೇ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಶ್ರೀನಿವಾಸ್ ಪ್ರಸಾದ್‌ಗೆ ನೀವು ಅನ್ಯಾಯ ಮಾಡಿದಾಗೆಲ್ಲಾ ಜನ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯನವರು ಸೇರಿ ಜೊತೆಯಲ್ಲಿರುವ ಸಚಿವರೂ ಕೂಡ ಸೋತು ಸುಣ್ಣವಾಗಿದ್ದಾರೆ” ಎಂದು ಹೇಳಿದರು.

Exit mobile version